Advertisement

40 ನಿಮಿಷ ಹೆಲಿಪ್ಯಾಡ್‌ನ‌ಲ್ಲಿ ಕಾಯ್ದ ಬಿಎಸ್‌ವೈ

02:32 AM Apr 05, 2019 | Team Udayavani |

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ನಡೆಸಲು ಬಾಗಲಕೋಟೆಗೆ ಬಂದಿದ್ದ ಯಡಿಯೂರಪ್ಪ, ರೋಡ್‌ ಶೋ ಬಳಿಕ ಹಾವೇರಿಗೆ ತೆರಳುವ ಮೊದಲು 40 ನಿಮಿಷ ಹೆಲಿಪ್ಯಾಡ್‌ನ‌ಲ್ಲಿ ಕಾದರು.

Advertisement

ದಾವಣಗೆರೆಯಿಂದ ಬಾಗಲಕೋಟೆಗೆ ಬಂದಿದ್ದ ಅವರು ಹಾವೇರಿಗೆ ತೆರಳಬೇಕಿತ್ತು. ಆದರೆ, ದಾವಣಗೆರೆಯಿಂದ ಪುನಃ ದಾವಣಗೆರೆಗೆ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲು ಚುನಾವಣೆ ಆಯೋಗದಿಂದ ಪರವಾನಗಿ ಪಡೆಯಲಾಗಿತ್ತು. ಹಾವೇರಿಯಲ್ಲಿ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲು ಪರವಾನಗಿ ಪಡೆದಿರಲಿಲ್ಲ. ಹೀಗಾಗಿ ಹಾವೇರಿಯ ಬಿಜೆಪಿ ಪ್ರಮುಖರು, ಚುನಾವಣೆ ಆಯೋಗದಿಂದ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಲು ಪರವಾನಗಿ ಪಡೆದ ಬಳಿಕ ಬಾಗಲಕೋಟೆಯಿಂದ ತೆರಳಬೇಕಾಯಿತು.

ಹೀಗಾಗಿ ಸುಮಾರು 40 ನಿಮಿಷಗಳ ಕಾಲ ಹೆಲಿಪ್ಯಾಡ್‌ನ‌ಲ್ಲಿ ಕಾರಿನಲ್ಲೇ ಕುಳಿತಿದ್ದರು. ಇದಕ್ಕೂ ಮುನ್ನ ಮಧ್ಯಾಹ್ನ 1ಕ್ಕೆ ಬಾಗಲಕೋಟೆಯ ಹೆಲಿಪ್ಯಾಡ್‌ಗೆ ಯಡಿಯೂರಪ್ಪ ಬಂದಿಳಿದರು. ಈ ವೇಳೆ ಪೊಲೀಸ್‌ ಹಾಗೂ ಚುನಾವಣೆ ಸಿಬ್ಬಂದಿ, ಹೆಲಿಕಾಪ್ಟರ್‌ ಹಾಗೂ ಅದರಲ್ಲಿದ್ದ ಬ್ಯಾಗ್‌ಗಳನ್ನು ತಪಾಸಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next