Advertisement

ಬಿಎಸ್‌ವೈ ಮುಂದಿನ ಸಿಎಂ: ಈಶ್ವರಪ್ಪ

12:28 PM May 03, 2017 | Harsha Rao |

ರಾಯಚೂರು: ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದು, ಅವರೇ ಮುಂದಿನ ಮುಖ್ಯಮಂತ್ರಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಮತ್ತು ನಾವು ಅಣ್ಣ-ತಮ್ಮಂದಿರಿದ್ದಂತೆ. ಸಂಸಾರದಲ್ಲಿ ಪತಿ-ಪತ್ನಿಯರ ಜಗಳದಂತೆ ಪಕ್ಷದಲ್ಲೂ ಆಗಾಗ ಭಿನ್ನಾಭಿಪ್ರಾಯ ಮೂಡುತ್ತವೆ. ಕೆಲವೇ ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ರಿಗೇಡ್‌ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಗೆ ರಾಯಣ್ಣ ಬ್ರಿಗೇಡ್‌ ಉದ್ದೇಶ ಏನೆಂಬ ಕುರಿತು ಸ್ಪಷ್ಟಪಡಿಸಲಾಗಿದೆ. ಅವರ ಮಾರ್ಗದರ್ಶನದನ್ವಯ ಬ್ರಿಗೇಡ್‌ ನಡೆಸಿಕೊಂಡು
ಹೋಗಲಾಗುತ್ತಿದೆ ಎಂದು ಹೇಳಿದರು.

ಕಣ ಕಣದಲ್ಲಿ ಬಿಜೆಪಿ: ಯಡಿಯೂರಪ್ಪ ಅವರೇ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮೊದಲು ಬಹಿರಂಗ ಹೇಳಿಕೆ ನೀಡಿದ್ದು. ಹೀಗಾಗಿ ಅನಿವಾರ್ಯವಾಗಿ ನಾನೂ ಮಾಧ್ಯಮಗಳ ಎದುರು ಬರಬೇಕಾಯಿತು. ಕಾಂಗ್ರೆಸ್‌-ಜೆಡಿಎಸ್‌ನೊಂದಿಗೆ ನಾನು ಒಳಒಪ್ಪಂದ ಮಾಡಿಕೊಂಡಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನನ್ನ ರಕ್ತದ
ಕಣಕಣದಲ್ಲಿ ಬಿಜೆಪಿಯಿದೆ. ಅದನ್ನು ಬಿಟ್ಟರೆ ನನಗೆ ಬೇರೆ ಗೊತ್ತಿಲ್ಲವೆಂದು ಸ್ಪಷ್ಟಪಡಿಸಿದರು.

ಬಿಜೆಪಿಯನ್ನು ಅಧಿಧಿಕಾರಕ್ಕೆ ತರುವುದರ ಜತೆಗೆ ರಾಜಕಾರಣದಲ್ಲಿ ರೆಸಾರ್ಟ್‌ ಸಂಸ್ಕೃತಿ ತೊಲಗಿಸುವ ಉದ್ದೇಶದಿಂದ ಬ್ರಿಗೇಡ್‌ ಸಂಘಟನೆಗೆ ಶ್ರಮಿಸುತ್ತಿಧಿದ್ದೇನೆ. ಶಾಸಕರು ರೆಸಾರ್ಟ್‌ ರಾಜಕಾರಣದ ಮೂಲಕ ಮುಖ್ಯಮಂತ್ರಿ ಆಯ್ಕೆ ಮಾಡುವ ಪದ್ಧತಿಗೆ ಕಡಿವಾಣ ಹಾಕುವುದೇ ನಮ್ಮ ಗುರಿ. ಹಿಂದೆ ಬಿಜೆಪಿ ಸರ್ಕಾರಕ್ಕೆ ರೆಸಾರ್ಟ್‌ ರಾಜಕಾರಣದಿಂದಲೇ ಕೆಟ್ಟ ಹೆಸರು ಬಂದಿತ್ತು.

Advertisement

ಅಂಥ ಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಬಿಜೆಪಿಯ ಬೆಳವಣಿಗೆಗಳಿಂದ ನನಗೂ ನೋವಾಧಿಗಿದೆ. ಪಕ್ಷದ ಸಂಘಟನೆಗಾಗಿ ಇದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next