ತುಮಕೂರು: ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಉದ್ಘಾಟಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಧರ್ಮ, ಜಾತಿ ಭೇದವಿಲ್ಲದೆ ಕಾಯಕ ಮಾಡಿದರು ಸಿದ್ಧಗಂಗಾ ಶ್ರೀಗಳು ಎಂದರು.
ತ್ರಿವಿಧ ದಾಸೋಹದ ಮೂಲಕ ಕೀರ್ತಿತಂದಿದ್ದಾರೆ. ಕಡುಬಡವ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಧಾರ್ಮಿಕ ಭಾವನೆ ತುಂಬಿದರು. ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರು ಎಂದು ನುಡಿದರು.
ಶ್ರೀಗಳ ಬದುಕು, ವ್ಯಕ್ತಿತ್ವ ಸಾರುವ ಉದ್ದೇಶದಿಂದ ಹುಟ್ಟೂರು ವೀರಾಪುರದಲ್ಲಿ 111 ಅಡಿ ವಿಗ್ರಹ ಸ್ಥಾಪನೆ ಹಾಗೂ ವೀರಾಪುರ ಅಭಿವೃದ್ಧಿ ಯೋಜನೆಗೆ 80 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಈಗಾಗಲೇ ಸರಕಾರದಿಂದ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ತುಮಕೂರಿನ ಮಠದಲ್ಲಿ ವಸ್ತುಸಂಗ್ರಹಾಲಯಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು
ಪುಣ್ಯ ಸ್ಮರಣಾದಿನವನ್ನು ದಾಸೋಹದ ದಿನವನ್ನಾಗಿ ಆಚರಿಸಲು ಆಜ್ಞೆ ಮಾಡಲಾಗುವುದು ಎಂದು ಹೇಳಿದರು.