Advertisement

ಮಿಷನ್‌ 150 ಗಾಗಿ ಬಿಎಸ್‌ವೈ ಹೆಲಿಕ್ಯಾಪ್ಟರ್‌ ಯಾತ್ರೆ 

04:19 PM Jan 02, 2018 | |

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ  ತಯಾರಿ ನಡೆಸುತ್ತಿರುವ ಬಿಜೆಪಿ  ಜನರನ್ನು ಸೆಳೆಯಲು ಭಾರೀ ಯೋಜನೆಗಳನ್ನು ಹಾಕಿಕೊಂಡಿದೆ. ಪರಿವರ್ತನೆ ಯಾತ್ರೆ ಮುಗಿದೊಡನೆಯೆ  ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು ವಿಶೇಷ ಹೆಲಿಕ್ಯಾಪ್ಟರ್‌ ಮೂಲಕ ಇನ್ನೊಂದು  ಸುತ್ತಿನ ಯಾತ್ರೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ಗೆಲ್ಲಲು ಗುರಿ ಇಟ್ಟುಕೊಳ್ಳಲಾಗಿರುವ 150  ಕ್ಷೇತ್ರಗಳಲ್ಲಿ ಹೆಲಿಕ್ಯಾಪ್ಟರ್‌ ಮೂಲಕ ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಪಕ್ಷವೇ ಹೆಲಿಕ್ಯಾಪ್ಟರ್‌ ಒದಗಿಸಲಿದೆ ಎಂದು ತಿಳಿದು ಬಂದಿದೆ. 

ಬಿಎಸ್‌ವೈ ಅವರಿಗೆ ಹೆಲಿಕ್ಯಾಪ್ಟರ್‌ ಯಾತ್ರೆ ವೇಳೆ ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ತಾರಾ ಪ್ರಚಾರಕರು ಸಾಥ್‌ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 

ಸದ್ಯ ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆಯಲ್ಲಿದ್ದು ಜನವರಿ 25 ರಂದು ಯಾತ್ರೆ ಅಂತ್ಯಗೊಳ್ಳಲಿದೆ. 

ಅತ್ಯಾಧುನಿಕ ಹೆಲಿಕ್ಯಾಪ್ಟರ್‌ ಬಳಸುವ ಸಾಧ್ಯತೆಗಳಿದ್ದು, ಯಾವ ಕಂಪೆನಿಯ ಹೆಲಿಕ್ಯಾಪ್ಟರ್‌ ತರಲಾಗುತ್ತಿದೆ ಎಂದು ಇನ್ನಷ್ಟೆ ತಿಳಿದು ಬರಬೇಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next