Advertisement

ಬಿಜೆಪಿ ಮತ್ತು ಮೋದಿಯನ್ನು ಉತ್ತರ ಕರ್ನಾಟಕದ ಜನತೆ ಅಟ್ಟಾಡಿಸಿ ಹೊಡೆಯುವ ಕಾಲ ಬರುತ್ತದೆ

11:36 AM Oct 19, 2019 | Sriram |

ಕೊಪ್ಪಳ: ಬಿಜೆಪಿಯವರ ಸುಳ್ಳಿನ ಭರವಸೆ ನೋಡಿರುವ ಉತ್ತರ ಕರ್ನಾಟಕದ ಜನತೆ ಮುಂದಿನ ದಿನದಲ್ಲಿ ಬಿಜೆಪಿ ಮತ್ತು ಮೋದಿಯನ್ನು ಅಟ್ಟಾಡಿಸಿ ಹೊಡೆಯುವ ಕಾಲ ಬರುತ್ತದೆ. ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಕನಕಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನತೆ ನೆರೆ ಹಾನಿಗೆ ನೊಂದು ಬೆಂದು ಹೋಗಿದ್ದಾರೆ. ಕೇಂದ್ರ ಸರ್ಕಾರ ಸರಿಯಾದ ಪರಿಹಾರ ಕೊಟ್ಟಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಬಿಜೆಪಿಯವರು ಹಾಗೂ ಮೋದಿ ಬರಿ ದೇಶದಲ್ಲಿ ಸುಳ್ಳು ಹೇಳುತ್ತಲೇ ಸುತ್ತಾಡುತ್ತಿದ್ದಾರೆ.

ಬಿಜೆಪಿ ಹಾಗೂ ಮೋದಿ ಅವರಿಗೆ ಮುಂದಿನ ದಿನದಲ್ಲಿ ಅಟ್ಟಾಡಿಸಿ ಹೊಡೆಯುತ್ತಾರೆ. ಆ ಕಾಲ ಸಮೀಪನೇ ಇದೆ. ಅವರಿಗೆ ಟೊಮೆಟೋ, ಕಲ್ಲು ಹೊಡೆಯುವುದರಲ್ಲಿ ಎರಡು ಮಾತಿಲ್ಲ. ಈ ಭಾಗದಲ್ಲಿನ ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದಾರೆ ಅವರ ನೆರೆವಿಗೆ ನೀರು ಬರದಿದ್ದರೆ ಏನರ್ಥ. ಅದರಲ್ಲೂ ಉತ್ತರ ಕರ್ನಾಟಕದ ಜನರು ಖಡಕ್ ರೊಟ್ಟಿ, ಚಟ್ನಿ ತಿಂದ ಗಿರಾಕಿಗಳು, ನಾವು ಗಂಡು ಮೆಟ್ಟಿದ ನಾಡಿನ ಜನ, ನಿಮಗೆ ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ನೇರ ವಾಗ್ಧಾಳಿ ನಡೆಸಿದರು.

ಇನ್ನೂ ರಾಜ್ಯದಲ್ಲಿ ನೆರೆ ನಿಭಾಯಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರ ಉಪ ಚುನಾವಣೆಯ ಬಳಿಕ ಪತನವಾಗಲಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪರಿಹಾರ ಕೊಡುವಲ್ಲಿಯೂ ವಿಳಂಬ ಮಾಡಿದ್ದಾರೆ. ಚುನಾವಣೆ ಬಳಿಕ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next