ಶಿವಮೊಗ್ಗ ; ರಾಜ್ಯದ ಅಧಿಕಾರದಲ್ಲಿ ಇನ್ನು ಆರು ತಿಂಗಳಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಂದಾಗಿ ಜನರು ಅತಂತ್ರರಾಗಿದ್ದಾರೆ ಸಮರ್ಪಕವಾದ ಅನುದಾನ ಸಿಗದೇ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವತ್ತ ಹೊರಟಿದ್ದಾರೆ ಎಂದರು.
ರಾಜ್ಯದ ಸಂಪೂರ್ಣ ಅಧಿಕಾರ ವಿಜಯೇಂದ್ರ ಹಾಗೂ ಶೋಭಾ ಕರಂದ್ಲಾಜೆ ಅವರ ಹಿಡಿತದಲ್ಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಸಂಖ್ಯೆ ಹೆಚ್ಚಾಗುತ್ತಿದ್ದು ಒಬ್ಬ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲು ಮಾಡಲು 50 ಲಕ್ಷ ಲಂಚ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಕೇಳಿಬರುತ್ತಿದೆ ಇದರಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಳ್ಳಿನ ಕುರ್ಚಿಯ ಮೇಲೆ ಕುಳಿತಿದ್ದಾರೆ ಆದರೆ ಮುಖ್ಯಮಂತ್ರಿ ಆಗಲು ಬಿಜೆಪಿಯಲ್ಲೇ ಎರಡು-ಮೂರು ಮಂದಿ ಕಾಯುತಿದ್ದು ಮುಂದಿನ ಆರು ತಿಂಗಳಿನಲ್ಲಿ ಸರಕಾರದಲ್ಲಿ ಬದಲಾವಣೆ ಆಗುವ ವಾತಾವರಣ ಇದೆ ಎಂದು ತಿಳಿಸಿದರು.
ಆದರೆ ಮುಂದೆ ನಡೆಯುವ ಬದಲಾವಣೆಗಳ ಬಗ್ಗೆ ಭವಿಷ್ಯ ಹೇಳಲು ನಾನು ಕೊಡಿ ಮಠದ ಸ್ವಾಮೀಜಿಯಲ್ಲ, ಸ್ವಾಮೀಜಿಯವರು ಯಾಕೋ ಮುಖ್ಯಮಂತ್ರಿಗಳ ಬಗ್ಗೆ ಭವಿಷ್ಯ ಹೇಳುತ್ತಿಲ್ಲ ಬಹುಶ ಅವರ ಬಗ್ಗೆ ಭವಿಷ್ಯ ಹೇಳಲು ಸ್ವಾಮೀಜಿಯವರಿಗೆ ಆಸಕ್ತಿ ಇಲ್ಲ ಅನಿಸುತ್ತೆ ಆದರೆ ಬದಲಾವಣೆ ಮಾತ್ರ ನಡೆಯುತ್ತೆ ಎಂದು ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.