Advertisement
ಬಸವಣ್ಣ ನಡೆದಾಡಿದ ಪವಿತ್ರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣ ದಶಕದ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆಯನ್ನಿಟ್ಟದ್ದು ಯಡಿಯೂರಪ್ಪ. ವಿತ್ತ ಸಚಿವರೂ ಆಗಿದ್ದ ಅವರು ಕಳೆದ ಬಜೆಟ್‌ನಲ್ಲಿ 500 ಕೋಟಿ ರೂ. ಪ್ರಕಟಿಸಿ, ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲೇ 100 ಕೋಟಿ ರೂ. ಒದಗಿಸಿದ್ದಲ್ಲದೇ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚುವರಿ 100 ಕೋಟಿ ರೂ. ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಮಾಡಿಸುವ ವಾಗ್ಧಾನ ಮಾಡಿದ್ದರು.
ಅನುದಾನ ಬಿಡುಗಡೆಯಾದರೂ ನಿರ್ಧಾರಿತ ವೇಗ ಸಿಗಬಹುದೇ? ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ದೊರೆತು ಕೆಲಸ ಪೂರ್ಣ ಆಗಬಹುದೇ ಎಂಬ ಚರ್ಚೆ ಕೇಳಿ ಬರುತ್ತಿವೆ.
Related Articles
Advertisement
ಅನುಭವ ಮಂಟಪ ಪಕ್ಷಿನೋಟಶರಣರ ಚಳವಳಿ ನೆನಪುಗಳನ್ನು ಮರುಸೃಷ್ಟಿಸುವ ದಿಸೆಯಲ್ಲಿ ಅನುಭವ ಮಂಟಪ ಕಟ್ಟಡದ ರೂಪುರೇಷೆ ತಯಾರಿಸಲಾಗಿದ್ದು, 7.5 ಎಕರೆ ವಿಸ್ತೀರ್ಣ ಮತ್ತು 182 ಅಡಿ ಎತ್ತರದ 6 ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸುವ ನೀಲನಕ್ಷೆ ಹೊಂದಿದೆ. ಒಟ್ಟು 100 ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದ ನಿರ್ಮಾಣ ಯೋಜನೆ ಇದಾಗಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ವಿಶಾಲವಾದ ದಾಸೋಹ ಭವನ ನಿರ್ಮಾಣ ಹಾಗೂ ಮೇಲಂತಸ್ತಿನಲ್ಲಿ 770 ಅಮರಗಣಂಗಳ ಸಂಕೇತವಾಗಿ 770 ಆಸನಗಳ ಸಭಾಭವನ. ಎಲ್ಲ ಅಂತಸ್ತುಗಳಲ್ಲಿ ಶರಣರ ವಿಚಾರಧಾರೆಗೆ ಸಂಬಂ ಸಿದ ಚಿಂತನಾ ಮಂಟಪಗಳು, ಅನುಷ್ಠಾನ ಗವಿಗಳು, ಕಂಬಗಳ ಮೇಲೆ ವಚನಗಳ ಕೆತ್ತನೆ, ಭಿತ್ತಿಚಿತ್ರ, ಉಬ್ಬುಚಿತ್ರಗಳು ಇರಲಿವೆ. ತ್ರಿಪುರಾಂತಕ ಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ, ಜತೆಗೆ ವಚನ ವಿವಿ ಸ್ಥಾಪನೆ ಉದ್ದೇಶವೂ ಇದೆ. ಸಿಎಂ ಯಡಿಯೂರಪ್ಪ ಪದತ್ಯಾಗದಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಯಾವುದೇ ಹಿನ್ನೆಲೆ ಆಗದು. ಮಂಟಪ ನಿರ್ಮಾಣ ಕೇವಲ ಯಡಿಯೂರಪ್ಪ, ಲಿಂಗಾಯತರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಎಲ್ಲರಿಗೂ ಹೆಮ್ಮೆಯ ಪ್ರತೀಕವಾದದ್ದು. ಯಾರೇ ಸಿಎಂ ಆದರೂ ಯೋಜನೆ ತ್ವರಿತವಾಗಿ ಪೂರ್ಣಗೊಂಡು ಬಿಜೆಪಿ ಸರ್ಕಾರದ ಅವಧಿ ಯಲ್ಲೇ ಲೋಕಾರ್ಪಣೆ ಆಗಲಿದೆ.
ಡಾ| ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್, ಬಸವಕಲ್ಯಾಣ *ಶಶಿಕಾಂತ ಬಂಬುಳಗೆ