Advertisement

ಸಿಎಂ ಕುಮಾರಸ್ವಾಮಿಗೆ ಬಿಎಸ್‌ವೈ ಪಂಚಪ್ರಶ್ನೆ

11:25 PM Apr 19, 2019 | Lakshmi GovindaRaju |

ಶಿವಮೊಗ್ಗ: ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಘಟಾನುಘಟಿ ನಾಯಕರು ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಮತ ಬೇಟೆ ಮುಂದುವರಿಸಿದ್ದಾರೆ. 23 ರಂದು ಮತದಾನ ನಡೆಯಲಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಡಿಕೆಶಿ ಬ್ರದರ್ಸ್‌ ಅಖಾಡಕ್ಕಿಳಿದಿದ್ದಾರೆ.

Advertisement

ಸಾಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಎಸ್‌ವೈ, ಸಿಎಂ ಕುಮಾರಸ್ವಾಮಿ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದು, ಈ ಪ್ರಶ್ನೆಗಳಿಗೆ ಶನಿವಾರ ಸಾಗರದಲ್ಲಿ ನಡೆಯಲಿರುವ ಜೆಡಿಎಸ್‌ ಪ್ರಚಾರ ಸಭೆಯಲ್ಲಿಯೇ ಉತ್ತರ ಕೊಡಿ ಎಂದು ಸವಾಲು ಹಾಕಿದರು.

1. ಪುಲ್ವಾಮಾದಲ್ಲಿ ಯೋಧರ ಮೇಲೆ ಆದ ದಾಳಿಯ ಬಗ್ಗೆ ನನಗೆ 2 ವರ್ಷಗಳ ಹಿಂದೆಯೇ ಗೊತ್ತಿತ್ತು ಎನ್ನುವ ಮುಖ್ಯಮಂತ್ರಿಗಳು, ಆ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಹೇಳದಿದ್ದರೂ, ರಾಷ್ಟ್ರಪತಿಗಳಿಗೆ ತಿಳಿಸಿದ್ದರೆ ದೇಶದ 44 ವೀರ ಯೋಧರ ಜೀವ ಉಳಿಯುತ್ತಿತ್ತಲ್ಲವೇ?

2. ಸಾವಿರಾರು ಕೋಟಿ ರೂ.ಗಳ ಅಕ್ರಮ ಹಣವನ್ನು ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಆಡಳಿತ ವ್ಯವಸ್ಥೆಯ ಗೌಪ್ಯತೆ ಕಾಪಾಡಿಕೊಳ್ಳಬೇಕು. ಅದು ಬಿಟ್ಟು ನಡೆಯುವ ಐಟಿ ದಾಳಿಯ ಬಗ್ಗೆ ಮುಂಚಿತವಾಗಿ ಸಾರ್ವಜನಿಕ ಹೇಳಿಕೆ ನೀಡಿದ್ದು ಸರಿಯೇ? ತಮ್ಮ ಆಪ್ತ ಗುತ್ತಿಗೆದಾರ, ಸಂಬಂಧಿಕರು ಹಣಸಂಪತ್ತು ವರ್ಗಾಯಿಸಿಕೊಳ್ಳಲು ಅವಕಾಶ ನೀಡಿದ್ದು ಅವರಿಗೆ ಶೋಭೆ ತರುತ್ತದೆಯೇ?

3. ದೇಶದ ಸೈನ್ಯಕ್ಕೆ ಸೇರುವವರನ್ನು ಗೌರವಿಸುವ ಬದಲು ಎರಡು ಹೊತ್ತು ಊಟಕ್ಕಿಲ್ಲದವರು ಸೈನಿಕರಾಗುತ್ತಾರೆ ಎಂದು ಹೇಳಿ ಅಪಮಾನ ಮಾಡುವುದು ಸರಿಯೇ?

Advertisement

4. ಜಿಲ್ಲೆಯ ನೀರಾವರಿ ಯೋಜನೆ ಕುರಿತಾಗಿ ಅಧಿ ಕಾರಿಗಳ ಸಮ್ಮುಖದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ಪಾರದರ್ಶಕ ಚರ್ಚೆ ನಡೆಸಿರುವಾಗ, ಅವರ ಮನೆಯಲ್ಲಿ ಸಿಕ್ಕ ಡೈರಿಯ ಬಿಡಿ ಪುಟಗಳ ಕುರಿತಾಗಿ ನಾನು ಮಾತನಾಡಲು ಹೋಗಿದ್ದೆ ಎಂದು ಸುಳ್ಳು ಆರೋಪಿಸಿದ್ದು ಏಕೆ? ಡೈರಿಯ ಬಿಡಿ ಪುಟಗಳ ಬರವಣಿಗೆ ನನ್ನ ಕೈ ಬರಹವಲ್ಲ ಎಂಬುದನ್ನು ಐಟಿ ಇಲಾಖೆ ದೃಢಪಡಿಸಿರುವುದು ಮುಖ್ಯಮಂತ್ರಿಗಳಿಗೆ ಮಾಹಿತಿ ಸಿಕ್ಕ ಮೇಲೂ ಆರೋಪಿಸುವುದು ಎಷ್ಟು ಸರಿ?

5. ಲೋಕಸಭಾ ಚುನಾವಣೆಯಲ್ಲಿ ಅಪ್ಪನ ಕ್ಷೇತ್ರದಲ್ಲಿ 70 ಕೋಟಿ, ಮಗನ ಕ್ಷೇತ್ರದಲ್ಲಿ 80 ಕೋಟಿ ಸೇರಿ 150 ಕೋಟಿ ರೂ. ಖರ್ಚು ಮಾಡಿದಿರಲ್ಲ. ಅದು ಯಾರಪ್ಪನ ಮನೆ ದುಡ್ಡು?

ಚುನಾವಣೆಗೇ ನಿಲ್ಲುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಹೇಗೆ ಆಗುತ್ತಾರೆ? ಡಿ.ಕೆ.ಶಿವಕುಮಾರ್‌, ಜಿ.ಪರಮೇಶ್ವರ್‌, ಖರ್ಗೆಯವರಾಗಲಿ ಅಥವಾ ರಾಹುಲ್‌ ಗಾಂಧಿಯೇ ಆಗಲಿ ಸಿದ್ದರಾಮಯ್ಯನವರಿಗೆ ನೀವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಲಿ. ಆಗ ಒಪ್ಪಿಕೊಳ್ಳಬಹುದು.
-ಕೆ.ಎಸ್‌.ಈಶ್ವರಪ್ಪ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next