Advertisement

ಪಂಚಭೂತಗಳಲ್ಲಿ ಬಿ.ಎಸ್‌.ಪಾಟೀಲ ಸಾಸನೂರ ಲೀನ

11:02 AM Jun 12, 2018 | |

ತಾಳಿಕೋಟೆ: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಬಿ.ಎಸ್‌. ಪಾಟೀಲ (ಸಾಸನೂರ) ಅವರ ಅಂತ್ಯಕ್ರಿಯೆ ಹಿರೂರ ಗ್ರಾಮದ ಭೋಗೇಶ್ವರ ಪ್ರೌಢಶಾಲಾ ಆವರಣದಲ್ಲಿ ರಡ್ಡಿ ಸಮಾಜದ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ನೆರವೇರಿತು.

Advertisement

ಈ ಸಂದರ್ಭದಲ್ಲಿ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಜನ ಸೇವೆಯೇ ಜನಾರ್ಧನ ಸೇವೆ
ಎಂದು ಜನರ ಮಧ್ಯೆಯೇ ಜೀವನ ನಡೆಸುವುದರೊಂದಿಗೆ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ಮಾಜಿ ಸಚಿವ ಬಿ.ಎಸ್‌. ಪಾಟೀಲ (ಸಾಸನೂರ) ಅವರ ಅಗಲಿಕೆ ಕೇವಲ ಅವರ ಕುಟುಂಬದವರಿಗೆ ನಷ್ಟವಲ್ಲ, ಇಡಿ ರಾಜ್ಯಕ್ಕೆ
ತುಂಬಲಾರದಂತಹ ನಷ್ಟ ಉಂಟಾಗಿದೆ ಎಂದರು.

ಮಾಜಿ ಸಚಿವ ಹಾಲಿ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಬಿ.ಎಸ್‌. ಪಾಟೀಲ (ಸಾಸನೂರ) ಮತ್ತು ನಮ್ಮ ತಂದೆ ಬಿ.ಎಂ. ಪಾಟೀಲ ಅವರ ಸ್ನೇಹ ಸಂಬಂಧದೊಂದಿಗೆ ನಡೆದ ರಾಜಕಾರಣದ ಗರಡಿಯಲ್ಲಿ ಬೆಳೆದ ನಾನು ಸಾಸನೂರ ಅವರ ಕುಟುಂಬದ ಸದಸ್ಯರಲ್ಲೊಬ್ಬ. ಅವರ ಕುಟುಂಬದಲ್ಲಿ ಆಗು ಹೋಗುವ ಪ್ರತಿಯೊಂದರಲ್ಲಿಯೂ ಭಾಗಿಯಾಗಿ ಕಷ್ಟ ಸುಖಗಳೊಂದಿಗೆ ರಾಜಕಾರಣವೆಂಬುದನ್ನು ಹೇಗೆ ಮಾಡ ಬೇಕೆಂಬುದನ್ನು ಕಲಿತಿದ್ದೇನೆ. ನನ್ನ ರಾಜಕೀಯ ಜೀವನದ ಗುರುಗಳ ಸಾಲಿನಲ್ಲಿ ಬಿ.ಎಸ್‌. ಪಾಟೀಲ (ಸಾಸನೂರ) ಅವರು ಒಬ್ಬರಾಗಿದ್ದಾರೆಂದರು. 

ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಮಾತನಾಡಿ, ಹೂವಿನ ಹಿಪ್ಪರಗಿ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಎರಡು ಬಾರಿ 4 ಖಾತೆಗಳೊಂದಿಗೆ ಸಚಿವ ಸ್ಥಾನ ನಿಭಾಯಿಸಿದ ಧೀಮಂತ ರಾಜಕಾರಣಿ. ನೇರ ನಿಷ್ಟೂರ ರಾಜಕಾರಣಿ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು.

ಹಿರೂರ ಹಿರೇಮಠದ ಜಯಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದ ರಾಜಕಾರಣದ ಇತಿಹಾಸದಲ್ಲಿಯೇ ಪರಿಭಾಷೆಯನ್ನು ಬರೆದಂತಹ ಸಾಸನೂರಿನ ನಂದಾದೀಪ ನಂದಿಹೋಗಿದ್ದು ಇದರಿಂದ ಜಿಲ್ಲೆಯಲ್ಲಿಯೇ ನಿಶಬ್ದ ವಾತಾವರಣ ನಿರ್ಮಾಣವಾಗಿದೆ. ಅವರು ಹಾಕಿಕೊಟ್ಟ ಪ್ರತಿಯೊಂದು ಮಾರ್ಗಗಳು ಎಲ್ಲರ ಜೀವನಕ್ಕೆ ದಾರಿ ದೀಪವಾಗಲಿವೆ. ಅವರ ದಾರಿಯಲ್ಲಿ ಎಲ್ಲರೂ ನಡೆಯಬೇಕೆಂದರು.

Advertisement

ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ, ಅರುಣ ಶಹಾಪುರ, ಮಾಜಿ ಶಾಸಕ ಸಿ.ಎಸ್‌. ನಾಡಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಳಗಿ ಮಾಜಿ ಶಾಸಕ ಜಿ.ಟಿ. ಪಾಟೀಲ, ವಿಜುಗೌಡ ಪಾಟೀಲ, ಗುಂಡಕನಾಳಶ್ರೀ, ಮನಗೂಳಿಶ್ರೀ,
ಬ.ಬಾಗೇವಾಡಿಶ್ರೀ, ವಡವಡಗಿಶ್ರೀ, ಕುಂಟೋಜಿಶ್ರೀ, ಖಾಸತ ಮಠದಶ್ರೀ, ಅಂಕಲಗಿ ಶ್ರೀಗಳು ಒಳಗೊಂಡು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next