Advertisement

ಬಿಎಸ್‌ವೈ ಉತ್ತರ ಕರ್ನಾಟಕದಿಂದ ಸ್ಪರ್ಧೆ-ತೀರ್ಮಾನವಾಗಿಲ್ಲ: ಶೋಭಾ

07:20 AM Sep 19, 2017 | |

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಉಡುಪಿಯಲ್ಲಿ ಹೇಳಿದ್ದಾರೆ.

Advertisement

ಸೋಮವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸ್ವಕ್ಷೇತ್ರ ಶಿವಮೊಗ್ಗ ಬಿಟ್ಟು ಬೇರೆ ಕ್ಷೇತ್ರದತ್ತ ಅವರಿಗೆ ಹೆಚ್ಚಿನ ಒಲವಿಲ್ಲ. ಸ್ಪರ್ಧೆಯ ಕುರಿತು ಅವರು ದ್ವಂದ್ವದಲ್ಲಿ ಇದ್ದಾರೆ. ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲು ಹಲವು ಜಿಲ್ಲೆಗಳಿಂದ ಬೇಡಿಕೆಗಳು ಬರುತ್ತಿವೆ. ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಬಹುಮತದಿಂದ ಗೆಲುವು ಸಾಧಿಸುತ್ತಾರೆ. ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದೇ ಬರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ  ಎಂದರು.

ಸಿಎಂಗೆ ಕ್ಷೇತ್ರ ಬದಲು ಅನಿವಾರ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ತನ್ನ ಕ್ಷೇತ್ರವನ್ನು ಬದಲು ಮಾಡುವ ಅನಿವಾರ್ಯ ಅವರಿಗಿದೆ. ವರುಣಾ ಕ್ಷೇತ್ರ ಸಿದ್ದರಾಮಯ್ಯ ಅವರ ಕೈತಪ್ಪಿ ಹೋಗಿಯಾಗಿದೆ. ಅವರು ಎಲ್ಲೇ ಸ್ಪರ್ಧಿಸಿದರೂ ಸೋಲು ನಿಶ್ಚಿತ ಎಂದರು.

ಗಣಪತಿ ಕೇಸ್‌ ಮುಚ್ಚಿ 
ಹಾಕಿದ್ದು ಸಿಐಡಿ

ಸಚಿವ ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿದ ಶೋಭಾ, ದಪ್ಪ ಚರ್ಮದ ರಾಜ್ಯ ಸರಕಾರಕ್ಕೆ ಯಾರ ಕೂಗು ಕೂಡ ಕೇಳಿಸುತ್ತಿಲ್ಲ. ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಕ್ಕೆ ಛೀಮಾರಿ ಹಾಕಿದೆ. ಈ ಪ್ರಕ
ರಣದ ಸಾಕ್ಷ éಗಳನ್ನು ರಾಜ್ಯ ಸರಕಾರ ಸಿಐಡಿ ಅಧಿಕಾರಿಗಳ ಮೂಲಕ ನಾಶ ಮಾಡಿದೆ. ಎಲ್ಲ ಕಡತಗಳನ್ನು ಅಳಿಸಿ ಹಾಕಲಾಗಿದೆ. ಸಿಐಡಿ ಅಧಿಕಾರಿಗಳು ಗಣಪತಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರ ಹಿಂದೆ ಸಿಎಂ ಹಾಗೂ ಸಚಿವ ಜಾರ್ಜ್‌ ಇರುವುದು ಸ್ಪಷ್ಟ ಎಂದರು.

ಮಳೆಗಾಲ ಬಳಿಕ ರಸ್ತೆ ದುರಸ್ತಿ
ಮಲ್ಪೆ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಯ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ ವಿಷಯ ಸಂಗ್ರಹಿಸಿದ್ದೇನೆ. ಮಣಿಪಾಲದಲ್ಲಿ ರಸ್ತೆಯ ಹೊಂಡ ಮುಚ್ಚುವ ಕೆಲಸ ಮಾಡಲಾ ಗಿದೆ. ಮಳೆ ಬಂದ ಕಾರಣ ಮತ್ತೆ ರಸ್ತೆಗಳು ಹಾಳಾಗಿವೆ. ಮಳೆಗಾಲ ಮುಗಿದ ಮೇಲೆ ರಾ. ಹೆದ್ದಾರಿಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಂಸದೆ ಶೋಭಾ ಹೇಳಿದರು.ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಮುಖಂಡ ಕೆ. ಉದಯ ಕುಮಾರ್‌ ಶೆಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next