Advertisement

ಬಿಎಸ್ಸೆನ್ನೆಲ್‌ ರಂಜಾನ್‌ಗೆ ಬಂಪರ್‌ ಕೊಡುಗೆ 

11:03 AM Jun 15, 2018 | |

ನವದೆಹಲಿ: ರಂಜಾನ್‌ಗೆ ಬಂಪರ್‌ ಕೊಡುಗೆ ಎನ್ನುವಂತೆ ಬಿಎಸ್‌ಎನ್‌ಎಲ್‌ ಹೊಸದೊಂದು ಪ್ಲಾನ್‌ ಪ್ರಕಟಿಸಿದೆ. 786 ರೂ. ಸ್ಪೆಷಲ್‌ ಟಾರಿಫ್ ವೋಚರ್‌ (ಎಸ್‌ಟಿವಿ) ರಿಚಾರ್ಜ್‌ (ಪ್ರೀಪೇಡ್‌) ಮಾಡಿದರೆ 300ಜಿಬಿ ಡಾಟಾ ಜತೆಗೆ ಅನ್‌ಲಿಮಿಟೆಡ್‌ ಕರೆಯನ್ನೂ ನೀಡುವುದಾಗಿ ಹೇಳಿದೆ. ಒಮ್ಮೆ ರಿಚಾರ್ಜ್‌ ಮಾಡಿಸಿಕೊಂಡರೆ 150 ದಿನಗಳ ಕಾಲ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಕಳುಹಿಸಬಹು ದಾಗಿದೆ.  ಆದರೆ ಜೂನ್‌ 12ರಿಂದ ಜುಲೈ 26ರ ಒಳಗೆ ರಿಚಾರ್ಜ್‌ ಮಾಡಿಸಿಕೊಂಡಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next