Advertisement

ಕರೆ ಮಾಡಿದ್ರೆ BSNLನಿಂದ ಕ್ಯಾಶ್‌ ಬ್ಯಾಕ್‌ ಆಫ‌ರ್‌

08:21 AM Nov 02, 2019 | Hari Prasad |

ಜಿಯೋ ತನ್ನ ಉಚಿತ ಕರೆ ಸೌಲಭ್ಯವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಹಲವಾರು ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ಆಕರ್ಷಕ ಆಫ‌ರ್‌ಗಳನ್ನು ನೀಡಿದ್ದು, ಬಿ.ಎಸ್‌.ಎನ್‌.ಎಲ್. ಕೂಡ ಇದೇ ಹಾದಿ ತುಳಿದಿದೆ.

Advertisement

ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್) ತನ್ನ ಗ್ರಾಹಕರಿಗೆ ಆರು ಪೈಸೆ ಕ್ಯಾಶ್‌ಬ್ಯಾಕ್‌ ನೀಡುವ ಪ್ರಸ್ತಾಪವನ್ನು ಮಾಡಿದ್ದು, ಟೆಲ್ಕೊ ಮೂಲಕ ಮಾಡುವ ಕರೆಗಳಲ್ಲಿ ಐದು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನನಿಮಿಷಗಳ ಕಾಲ ಮಾತನಾಡುವ ಚಂದಾರರಿಗೆ ಕ್ಯಾಶ್‌ ಬ್ಯಾಕ್‌ ನೀಡುತ್ತಿದೆ.

ಈ ನಿಯಮ BSNL ವೈರ್‌ ಲೈನ್‌, ಬ್ರಾಡ್‌ ಬ್ಯಾಂಡ್‌ ಮತ್ತು FTH ಚಂದಾದಾರರಿಗೆ ಅನ್ವಯಿಸಲಿದ್ದು, ಈ ಯೋಜನೆ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವನ್ನು BSNL ಸಂಸ್ಥೆ ಹೊಂದಿದೆ.

ಜಿಯೋದಿಂದ ಇತರ ಮೊಬೈಲ್‌ ನೆಟ್ ವರ್ಕ್ ಗಳಿಗೆ ಕರೆ ಮಾಡುವ ಗ್ರಾಹಕರ ಮೇಲೆ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಿದ ರಿಲಯನ್ಸ್‌ ಸಂಸ್ಥೆಗೆ, BSNLನ ಈ ಯೋಜನೆ ಪರೋಕ್ಷ ಪೈಪೋಟಿ ನೀಡಲಿದೆ. ಇಂತಹ ಆಫ‌ರ್‌ನೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ BSNL ಚೇತರಿಸಿಕೊಳ್ಳಲು ಸಾಧ್ಯವಾಗಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next