Advertisement

ಬಿಎಸ್‌ಕೆಬಿ: ಸಂಜೀವಿನಿ ಸೀನಿಯರ್‌ ಕೇರ್‌ ಸೆಂಟರ್‌ ಉದ್ಘಾಟನೆ

04:12 PM Aug 29, 2018 | Team Udayavani |

ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲದ ವತಿಯಿಂದ  ಸ್ವಾತಂತ್ರ್ಯ ದಿನಾಚರಣೆಯು ಹಿರಿಯ ನಾಗರಿಕರ ಆಶ್ರಯಧಾಮ ಆಶ್ರಯದಲ್ಲಿ  ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಉಪಾಧ್ಯಕ್ಷ ವಾಮನ್‌ ಹೊಳ್ಳ ಅವರು  ಧ್ವಜಾರೋಹಣಗೈದು  ಶುಭಾಶಯ ಕೋರಿದರು. ಅನಂತರ  ಸಾಮಾ ಗ್ರೂಪ್‌ನಿಂದ  ಸಂಗೀತ ರಸಮಂಜರಿ ಜರಗಿತು.  ಈ  ಸಂದರ್ಭದಲ್ಲಿ   ಡಾ| ಸುರೇಶ್‌ ರಾವ್‌ ಅವರ ನೇತೃತ್ವದಲ್ಲಿ ಆವಶ್ಯಕ  ವೈದ್ಯಕೀಯ ಸಲಕರಣೆಗಳಾದ ವ್ಹೀಲ್‌ ಚೆಯರ್‌, ವಾಕಿಂಗ್‌ ಸ್ಟಿಕ್‌, ಏರ್‌ ಬೆಡ್‌, ವಾಕರ್‌, ನೆಬುಲೈಜರ್‌ ಇತ್ಯಾದಿ  ಸಲಕರಣೆಗಳನ್ನು  ಅಗತ್ಯವುಳ್ಳವರಿಗೆ ಒದಗಿಸುವ ಸೇವಾ ಸೌಲಭ್ಯವುಳ್ಳ ಆಶ್ರಯ ಸಂಜೀವಿನಿ – ಸೀನಿಯರ್‌ ಕ್ಯಾರ್‌  ಸೆಂಟರ್‌ನ್ನು   ಸಂಘದ ಅಧ್ಯಕ್ಷ ಡಾ| ಸುರೇಶ್‌ ಎಸ್‌.  ರಾವ್‌, ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿ ಹಾಗೂ  ಸರ್ವ ಸದಸ್ಯರುಗಳ ಸಮ್ಮುಖದಲ್ಲಿ,   ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಡಾ| ನರೇಂದ್ರ ತ್ರಿವೇದಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಅಪೋಲೋ ಹಾಸ್ಪಿಟಲ್ಸ್‌ ನವಿ ಮುಂಬಯಿ ಇವರು  ಉದ್ಘಾಟಿಸಿದರು.

ಚಿತ್ರಾ ಮೇಲ್ಮನೆಯವರು ಡಾ| ನರೇಂದ್ರ ತ್ರಿವೇದಿಯವರನ್ನು  ಪರಿಚಯಿಸಿದರು. ಮುಖ್ಯ ಅತಿಥಿಗಳನ್ನು ಪದಾಧಿಕಾರಿಗಳು ಶಾಲು ಹೊದೆಸಿ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಡಾ|  ನರೇಂದ್ರ ತ್ರಿವೇದಿಯವರು ಮಾತನಾಡಿ,  ಉನ್ನತ ಧ್ಯೇಯವುಳ್ಳ ಇಂತಹ  ಸೇವಾ ಸೌಲಭ್ಯಕ್ಕೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.  ಹರಿದಾಸ್‌ ಭಟ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಅಪರಾಹ್ನ  ಡಾ| ಸುರೇಶ್‌ ಎಸ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ  ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ, ಉಪಾಧ್ಯಕ್ಷರುಗಳಾದ  ವಾಮನ್‌ ಹೊಳ್ಳ ಮತ್ತು ಶೈಲಿನಿ ರಾವ್‌, ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಜತೆ ಕಾರ್ಯದರ್ಶಿ ಚಿತ್ರಾ  ಮೇಲ್ಮನೆ, ಕೋಶಾಧಿಕಾರಿ ಹರಿದಾಸ್‌ ಭಟ್‌, ಜತೆ ಕೋಶಾಧಿಕಾರಿ ಕುಸುಮ್‌ ಶ್ರೀನಿವಾಸ್‌, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್‌ ಉಪಸ್ಥಿತರಿದ್ದರು.

ಬೈಲೂರು ಬಾಲಚಂದ್ರ ರಾವ್‌ ಅವರು ತಮ್ಮ ಮಾತಾ-ಪಿತರಾದ ಬೈಲೂರು ಲಕ್ಷಿ$¾àನಾರಾಯಣ ರಾವ್‌ ಮತ್ತು ಜಲಜಾಕ್ಷಮ್ಮನವರ  ಹೆಸರಿನಲ್ಲಿ ಸ್ಥಾಪಿಸಿದ ಗೋಕುಲ  ಕಲಾಶ್ರೀ  ಪ್ರಶಸ್ತಿಯನ್ನು ಗೋಕುಲದ  ಕಾರ್ಯಕಾರೀ ಸಮಿತಿ  ಸದಸ್ಯೆ  ಪ್ರೇಮಾ ಎಸ್‌. ರಾವ್‌ ಅವರಿಗೆ   ಅಧ್ಯಕ್ಷರು, ಪದಾಧಿಕಾರಿಗಳು ಮತ್ತು  ಬಾಲಚಂದ್ರ ರಾವ್‌ ಹಾಗೂ ಪ್ರಭಾವತಿ ರಾವ್‌ ದಂಪತಿ  ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರಗಳೊಂದಿಗೆ  ಪ್ರದಾನಿಸಿದರು.

Advertisement

ಡಾ| ಸಹನಾ ಪೋತಿ ಸಮ್ಮಾನ  ಪತ್ರ ವಾಚಿಸಿದರು. ಬಾಲಚಂದ್ರ ರಾವ್‌ ಅವರು  ಅಭಿನಂದನಾ ನುಡಿಗಳನ್ನಾಡಿ,  ಹಲವು  ವರ್ಷಗಳಿಂದ ಗೋಕುಲದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ, ಸಾಹಿತ್ಯ, ಭಜನೆ, ನೃತ್ಯ, ನಾಟಕ, ಯಕ್ಷಗಾನ ಇತ್ಯಾದಿ ಕ್ಷೇತ್ರಗಳಲ್ಲಿ  ಪ್ರೇಮಾ ರಾವ್‌ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಿದರು.

ಯೋಜನೆಗಳಿಗೆ ಸಹಕರಿಸಿ
ಡಾ| ಸುರೇಶ್‌ ಎಸ್‌. ರಾವ್‌  ಅವರು ಮಾತನಾಡಿ, ಪ್ರೇಮಾ ರಾವ್‌ ಅವರು ಗೋಕುಲಕ್ಕೆ ಸಲ್ಲಿಸುತ್ತಿರುವ ಸೇವೆಯ  ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಗೋಕುಲದ ಪುನರ್‌ ನಿರ್ಮಾಣ ಹಾಗೂ ಪ್ರಸ್ತುತ ಯೋಜನೆಗಳನ್ನು ವಿಸ್ತಾರವಾಗಿ ವಿವರಿಸಿ ಸದಸ್ಯರೆಲ್ಲರ ಸಹಕಾರ ಕೋರಿದರು.  

ಸಮ್ಮಾನಕ್ಕೆ ಉತ್ತರಿಸಿದ ಪ್ರೇಮಾ ರಾವ್‌ ಅವರು, ತಾನು ಕಾರ್ಯಕಾರಿ ಸಮಿತಿಗೆ ಸೇರಿದಾಗಿನಿಂದ ತನಗೆ ಪೂರ್ಣ ಬೆಂಬಲವನ್ನಿತ್ತು ಸಹಕರಿಸಿದ ಎಲ್ಲ ಪದಾಧಿಕಾರಿಗಳಿಗೆ, ಕಾರ್ಯ ಕಾರಿ ಸಮಿತಿಗೆ, ಮಾರ್ಗದರ್ಶನವನ್ನಿತ್ತ ಹಿರಿಯ ರಿಗೆ  ತನ್ನ ಮನದಾಳದ ಧನ್ಯವಾದ ಸಲ್ಲಿಸಿದರು.

ಅನಂತರ  ಪ್ರಸಕ್ತ ಶೆ„ಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುರಸ್ಕರಿಸಿದರು.  ಇಂದ್ರಾಣಿ ರಾವ್‌ ಬಹುಮಾನ ವಿಜೇತರ ಯಾದಿಯನ್ನು ವಾಚಿಸಿದರು.   ಕಾರ್ಯದರ್ಶಿ ಎ. ಪಿ. ಕೆ. ಪೋತಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next