Advertisement

ಬಿಎಸ್‌ಕೆಬಿ ಅಸೋಸಿಯೇಶನ್‌:ಸಂಕ್ರಾಂತಿ, ಸತ್ಯನಾರಾಯಣ ಮಹಾಪೂಜೆ

12:09 PM Jan 16, 2018 | Team Udayavani |

ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇ ಶನ್‌ ಮುಂಬಯಿ ಗೋಕುಲ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜ. 14ರಂದು ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ  ಅದಮಾರು ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ಮಕರ ಸಂಕ್ರಾಂತಿ ಸಂಭ್ರಮವನ್ನು  ಆಚರಿಸಲಾಯಿತು.

Advertisement

ಮಕರ ಸಂಕ್ರಾಂತಿಯ ಅಂಗವಾಗಿ ಬೆಳಗ್ಗೆ ವಿದ್ವಾನ್‌ ಶ್ರೀ ಕೃಷ್ಣರಾಜ ಉಪಾಧ್ಯಾಯ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಎ. ಎಸ್‌. ರಾವ್‌ ಮತ್ತು  ಶಾಂತಾ ಎ. ರಾವ್‌ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಸಯಾನ್‌ ಕೇಂದ್ರ ಕಚೆೇರಿಯ ಗೋಕುಲ ಭಜನಾ ಮಂಡಳಿ ಹಾಗೂ ಪ್ರಾದೇಶಿಕ ಭಜನಾ ಮಂಡಳಿಗಳಿಂದ  ಭಜನ ಕಾರ್ಯಕ್ರಮ ನಡೆಯಿತು. ಶ್ರೀಷಾ ಉಡುಪ, ಕುಮಾರ್‌ ಭಟ್‌, ಹರಿ ಭಟ್‌ ಮುಂಡ್ಕೂರು, ಕುಂಜತ್ತೂರು ವಾಸುದೇವ ಉಡುಪ ಅವರು ವಿವಿಧ ಧಾರ್ಮಿಕ  ಪೂಜಾದಿಗಳನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಗೋಕುಲ-2020 ಯೋಜನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿ, ಶಿಕ್ಷಣಕ್ಕೆ ಬಡತನ ಅಡಚಣೆಯಾಗಬಾರದು. ಬ್ರಾಹ್ಮಣರು ಶಿಕ್ಷಣದಲ್ಲಿ ಮುಂದುವರಿದವರು. ಆದ್ದರಿಂದ ನಮ್ಮ ಭವಿಷ್ಯತ್ತಿನ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಎಂದೂ ಕಷ್ಟವಾಗಬಾರದು. ಇದಕ್ಕೆ ನಮ್ಮ ಸಂಸ್ಥೆಯ ವಿದ್ಯಾನಿಧಿ ಪೂರಕವಾಗಿದೆ. ಅಂತೆಯೇ ಆಶ್ರಯ ಮೂಲಕ ನಾವು ಸೇವಾ ನಿರತವಾಗಿದ್ದೇವೆ. ಹಿರಿಯ ನಾಗರಿಕರಿಗೆ ಮನೆ ಮತ್ತು ಮನದ ಸೇವೆ ಸಂದಾಗ ಮಾತ್ರ ನಮ್ಮ ಸೇವೆ ಸಾರ್ಥಕವಾಗುವುದು. ಇದಕ್ಕಾಗಿ ಆಶ್ರಯದ ಸೇವೆ ಸರ್ವೋತ್ಕೃಷ್ಟವಾಗಿಸಿದ್ದೇವೆ. ಸಯಾನ್‌ನ ಸ್ವಜಾಗದಲ್ಲಿ ಕೃಷ್ಣ ಮಂದಿರ ಶೀಘ್ರವೇ ಸಿದ್ಧಗೊಳ್ಳಲಿದೆ. ಎಲ್ಲಕ್ಕಿಂತ ಇದು ವಿಭಿನ್ನವಾಗಿ ಒಳ್ಳೆಯ ಮಂದಿರವಾಗಿ ಮುಂಬಯಿಯಲ್ಲೇ ಅತೀ ಸುಂದರ ಮತ್ತು ದಕ್ಷಿಣ ಭಾರತೀಯರ ಸಂಪ್ರದಾಯದಂತೆ ಸೇವಾ ನಿರತವಾಗಲಿದೆ. ಇದಕ್ಕೆಲ್ಲಾ ಸಹೃದಯರ ಸೇವೆ, ಸಹಯೋಗ ಅಗತ್ಯವಿದೆ. ಪ್ರೋತ್ಸಾಹಕ್ಕಿಂತ ದೊಡ್ಡ ಸಹಾಯ ಬೇರೊಂದಿಲ್ಲ. ಗೋಕುಲದ ಪ್ರಗತಿ ಸಮುದಾಯದ ಪ್ರಗತಿಯಾಗಿದೆ ಎಂದ‌ು ನುಡಿದು ಎಲ್ಲರಿಗೂ ಶುಭಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಹನಾ ಭಾರದ್ವಾಜ್‌ ಬಳಗದಿಂದ ನೃತ್ಯಾರ್ಪಣೆಗೈದರು. ಅಸೋ ಸಿಯೇಶನ್‌ನ ಸದಸ್ಯ ಪರಿವಾರವು ಸಂಕ್ರಾಂತಿ ನೃತ್ಯಗಳನ್ನು ಪ್ರದರ್ಶಿಸಿ ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ಮ ನರಂಜನೆ ನೀಡಿದರು. ಮಹಿಳೆಯರು ಬಳೆ, ಅಡಿಕೆ-ವೀಳ್ಯದೆಲೆ, ಎಳ್ಳುಂಡೆ ನೀಡಿ ಹಣೆಗೆ ಅರಸಿನ ಕುಂಕುಮ ಹಚ್ಚಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಿದರು.

ಕಾರ್ಯಕ್ರಮದಲ್ಲಿ ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್‌ ರಾವ್‌, ಬಿಎಸ್‌ಕೆಬಿಎ ಉಪಾಧ್ಯಕ್ಷ, ಆಶ್ರಯ ಸಮಿತಿಯ ಕಾರ್ಯಾಧ್ಯಕ್ಷ  ವಾಮನ ಹೊಳ್ಳ ಮತ್ತು ವೈವಾಹಿಕ ಸಮಿತಿಯ ಕಾರ್ಯಾಧ್ಯಕ್ಷೆ ಶೈಲಿನಿ ಎ. ರಾವ್‌, ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭನ್‌ ಕೆ. ಪೋತಿ, ಗೌರವ ಕೋಶಾಧಿಕಾರಿ ಹರಿದಾಸ್‌ ಭಟ್‌, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಪಿ. ಬಿ. ಕುಸುಮಾ ಶ್ರೀನಿವಾಸ್‌, ವಿಜಯಲಕ್ಷಿ¾à ಎಸ್‌. ರಾವ್‌ ಸೇರಿದಂತೆ ಅನೇಕ ಪುರೋಹಿತರು, ಇತರ  ಪದಾಧಿಕಾರಿಗಳು, ಉಪ ಸಮಿತಿಗಳ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Advertisement

ಮಹಿಳಾ ವಿಭಾಗಧ್ಯಕ್ಷೆ ಐ. ಕೆ ಪ್ರೇಮಾ ಎಸ್‌. ರಾವ್‌ ಅವರು  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಎಚ್‌. ಭಟ್‌ ಮತ್ತು ಡಾ| ಸಹನಾ ಎ. ಪೋತಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್‌.  ರಾವ್‌ ವಂದಿಸಿದರು. ಸಮಾಜ ಬಾಂಧವರು, ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next