Advertisement

ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ:ಚಿಣ್ಣರ ಶಿಬಿರ

03:20 PM Jan 02, 2018 | |

ಮುಂಬಯಿ: ಸಾಯನ್‌ನ ಬಿಎಸ್‌ಕೆಬಿ ಅಸೋಸಿಯೇಶನ್‌ ಗೋಕುಲ ಯುವ ವಿಭಾಗದ ವತಿಯಿಂದ ಈ ಬಾರಿಯೂ ಚಿಣ್ಣರಿಗಾಗಿ ಎರಡು ದಿನದ ಚಳಿಗಾಲದ ಶಿಬಿರವನ್ನು ನೆರೂಲ್‌ನ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಶಿಬಿರದ ಸಮಾರೋಪ ಸಮಾರಂಭವು ಡಾ| ಸುರೇಶ್‌ ಎಸ್‌.ರಾವ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ಜರಗಿತು.    ಶಿಬಿರದಲ್ಲಿ ಮಕ್ಕಳಿಗೆ  ಭಜನೆ, ಕನ್ನಡ ಭಾಷಾಜ್ಞಾನ, ರಂಗೋಲಿ,  ಪೇಪರ್‌ನಿಂದ
ಚೀಲಗಳನ್ನು ತಯಾರಿಸುವುದು, ಮಧುಬನಿ, ಒರಿಗಾಮಿ, ಗ್ರೀಟಿಂಗ್‌ ಕಾರ್ಡ್‌ ತಯಾರಿ ಇತ್ಯಾದಿಗಳನ್ನು, ಸಹನಾ ಪೋತಿ, ಸಹನಾ ಭಾರದ್ವಾಜ್‌, ಚೈತ್ರಾ ಪೋತಿ, ಅಂಜನಾ ರಾವ್‌, ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ, ಪಿ. ಸಿ. ಎನ್‌. ರಾವ್‌, ಅರುಣಾ ಆಚಾರ್‌  ಅವರು  ಕಲಿಸಿಕೊಟ್ಟರು.

ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯಮಟ್ಟದ ವೇದಿಕ್‌ ಗಣಿತ ಸ್ಪರ್ಧೆಯಲ್ಲಿ  4ನೇ ಬಹುಮಾನವನ್ನು ಪಡೆದ ಸುದೀಪ್‌ ಉಡುಪ,ವೇದಿಕ್‌ ಗಣಿತದ ಮೂಲಕ ಸರಳವಾಗಿ ಗಣಿತವನ್ನು ಮಾಡುವ 
ವಿಧಾನಗಳನ್ನು ತಿಳಿಸಿದರು. ಡಾ| ಸುರೇಶ್‌ ರಾವ್‌ ಅವರು ಮಕ್ಕಳಿಗೆ ಶುಭಾಶಯ  ಕೋರಿ, ಭಾಗವಹಿಸಿದ ಮಕ್ಕಳು ಹಾಗೂ ಅವರ ಪಾಲಕರು ಶಿಬಿರದಿಂದಾಗುವ ಪ್ರಯೋಜನಗಳನ್ನು ಇತರರಿಗೂ ತಿಳಿಸಿ, ಮುಂದಿನ ಶಿಬಿರದಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಭಾಗವಹಿಸುವಂತೆ  ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು. ಶಿಬಿರದ ಯಶಸ್ಸಿಗೆ ಸಹಕರಿಸಿದ  ಸ್ವಯಂ ಸೇವಕರಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು.

ಕಾರ್ಯದರ್ಶಿ ಅನಂತ ಪಿ. ಕೆ. ಪೋತಿ, ಜತೆ ಕಾರ್ಯದರ್ಶಿ ಪಿ. ಸಿ. ಎನ್‌. ರಾವ್‌, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್‌,  ಕಾರ್ಯಕಾರಿ ಸಮಿತಿಯ ಸದಸ್ಯ ರಾಮವಿಠಲ ಕಲ್ಲೂರಾಯ ಉಪಸ್ಥಿತರಿದ್ದರು. ಯುವ ವಿಭಾಗದ ಅಧ್ಯಕ್ಷ ಹರಿದಾಸ್‌ ಭಟ್‌ ಸ್ವಾಗತಿಸಿದರು. ಸಂಚಾಲಕಿ ವಿನೋದಿನಿ ರಾವ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next