ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ವಲಯದಲ್ಲಿರುವ ಭಾರತ-ಪಾಕ್ ಗಡಿಭಾಗದಲ್ಲಿ ಶನಿವಾರ ಪಾಕಿಸ್ಥಾನದ 3 ವರ್ಷದ ಬಾಲಕನೊಬ್ಬ ಗಡಿದಾಟಿ ಭಾರತ ಪ್ರವೇಶಿಸಿದ್ದಾನೆ.
ಅಚಾನಕ್ಕಾಗಿ ಹೀಗೆ ಬಂದ ಪುಟ್ಟ ಬಾಲಕನನ್ನು ಸುರಕ್ಷಿತವಾಗಿರಿಸಿಕೊಂಡು, ಅನಂತರ ಪಾಕ್ ಸೈನಿಕರಿಗೆ ಹಸ್ತಾಂತರಿಸಿದ್ದಾರೆ. ಇದೊಂದು ಮಾನವೀಯ ನೆಲೆಯಲ್ಲಿ ಗೌರವದಿಂದ ಮಾಡಿದ ಕೆಲಸ. ಬಿಎಸ್‌ಎಫ್ ಯಾವಾಗಲೂ ಗೊತ್ತಾಗದೇ ಅಚಾನಕ್ಕಾಗಿ ಗಡಿದಾಟಿದವರನ್ನು ಮಾನವೀಯವಾಗಿಯೇ ನಡೆಸಿಕೊಳ್ಳುತ್ತದೆ ಎಂದು ಬಿಎಸ್‌ಎಫ್ ಹೇಳಿಕೊಂಡಿದೆ.
ಕೇವಲ 3 ವರ್ಷದ ಮಗುವಾಗಿದ್ದರಿಂದ ಏನೂ ಮಾತನಾಡಲು ತಿಳಿಯದೇ, ಏನು ಮಾಡಬೇಕೆಂದು ಗೊತ್ತಾಗದೇ ಬಾಲಕ ಚಡಪಡಿಸುತ್ತಿದ್ದ. ಇದನ್ನು ಮನಗಂಡ ಭಾರತೀಯ ಯೋಧರು ಮಗುವನ್ನು ಅಷ್ಟೇ ಪ್ರೀತಿಯಿಂದ ನಡೆಸಿಕೊಂಡಿದ್ದಾರೆ.
ಪಾಕ್ ಪತ್ರಕರ್ತನ ಮೇಲೆ ಹಲ್ಲೆ: ಪಾಕಿಸ್ಥಾನದ ಪ್ರಭಾವೀ ಸೇನಾ ಮುಖ್ಯಸ್ಥರನ್ನು “ಪ್ರಾಪರ್ಟಿ ಡೀಲರ್ಸ್’ ಎಂದು ವ್ಯಂಗ್ಯವಾಡಿದ್ದ ಪಾಕ್ ಪತ್ರಕರ್ತನ ಮೇಲೆ ಶುಕ್ರವಾರ ರಾತ್ರಿ ಹಲ್ಲೆಯಾಗಿದೆ.
ದುನ್ಯಾ ನ್ಯೂಸ್ ವಾಹಿನಿಯ ರಾಜಕೀಯ ವಿಶ್ಲೇಷಕ ಅಯಾಝ್ ಅಮೀರ್ (73) ತಮ್ಮ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದಾಗ, ಮಾಸ್ಕ್ ಧರಿಸಿದ್ದ ಅಪರಿಚಿತರು ಹಲ್ಲೆ ಮಾಡಿ, ಬಟ್ಟೆ ಹರಿದುಹಾಕಿದ್ದಾರೆ.
9 ಭಯೋತ್ಪಾದಕರ ಬಂಧನ: ಪಂಜಾಬ್ ಪ್ರಾಂತದಲ್ಲಿ ಐಸಿಸ್‌ಗೆ ಸೇರಿದ 9 ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಉಗ್ರ ನಿಗ್ರಹ ದಳದ ಸುಳಿವಿನ ಮೇರೆಗೆ ಪೊಲೀಸರು ಈ ದಾಳಿ ಮಾಡಿದ್ದರು.