Advertisement

ಇಂಡೋ-ಪಾಕ್ ಗಡಿ ಸಮೀಪ ಬಿಎಸ್ಎಫ್ ಕಾರ್ಯಾಚರಣೆ: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

08:01 PM Sep 12, 2020 | Mithun PG |

ಫಿರೋಜ್‌ಪುರ: ಇಂಡೋ-ಪಾಕ್ ಗಡಿಯ ಸಮೀಪವಿರುವ ಪಂಜಾಬ್‌ ನ ಅಬೋಹಾರ್ ಸೆಕ್ಟರ್‌ನಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ವಶಪಡಿಸಿಕೊಂಡಿದೆ. ಈ ಮೂಲಕ ಕಳ್ಳಸಾಗಾಣಿಕೆ ಮಾಡುತ್ತಿದ್ದ ಯತ್ನವನ್ನು ವಿಫಲಗೊಳಿಸಿದೆ.

Advertisement

ವರದಿಗಳ ಪ್ರಕಾರ, ಬಿಎಸ್‌ಎಫ್‌ನ 124 ನೇ ಬೆಟಾಲಿಯನ್‌, 3 ಎಕೆ -47 ರೈಫಲ್‌ಗಳು, 91 ಸುತ್ತಿನ 7.62 ಎಂಎಂ ಮದ್ದುಗುಂಡುಗಳು, ನಾಲ್ಕು ಎಂ-16 ರೈಫಲ್, 57 ಸುತ್ತುಗಳ 5.56 ಎಂಎಂ ಮದ್ದುಗುಂಡುಗಳು, ಎರಡು  ಮೇಡ್ ಇನ್ ಚೀನಾ ಪಿಸ್ತೂಲ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಈ ಮೂಲಕ ಬಿಎಸ್ಎಫ್ ಪಡೆ ಭಾರೀ ದುರಂತವೊಂದನ್ನು ತಡೆಗಟ್ಟಿದೆ. ಬಿಎಸ್ಎಫ್ ಪಡೆ ಇದೇ  ವರ್ಷಾರಂಭದಿಂದ ಇಲ್ಲಿಯವರೆಗೂ  394.742 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ, ಭಾರತೀಯ ಗಡಿಯನ್ನು ದಾಟಿದ 77 ಜನರನ್ನು ಬಂಧಿಸಿದೆ, ಇದರಲ್ಲಿ 10 ಪಾಕಿಸ್ತಾನದ ಒಳನುಸುಳುಕೋರರಿದ್ದರು. ವಿವಿಧ ರೀತಿಯ ಶಸ್ತ್ರಾಸ್ತ್ರಗಳು, 650 ಸುತ್ತು ಮದ್ದುಗುಂಡುಗಳು, ಆರು ಪಾಕಿಸ್ತಾನ ಮೊಬೈಲ್ ಫೋನ್‌ಗಳು ಮತ್ತು 10 ಪಾಕಿಸ್ತಾನ ಸಿಮ್ ಕಾರ್ಡ್‌ಗಳು  ವಶಕ್ಕೆ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next