Advertisement

ಹರಾಮಿ ನಾಲಾದಲ್ಲಿ ಪಾಕಿಸ್ತಾನದ ಎರಡು ದೋಣಿಗಳು ಪತ್ತೆ

01:10 AM Aug 25, 2019 | mahesh |

ಅಹಮದಾಬಾದ್‌: ಪಾಕಿಸ್ತಾನಕ್ಕೆ ಸೇರಿದ ಎರಡು ಮೀನುಗಾರಿಕಾ ದೋಣಿಗಳು ಗುಜರಾತ್‌ನ ಕಛ್ ಜಿಲ್ಲೆಯ ‘ಹರಾಮಿ ನಾಲಾ’ ಪ್ರದೇಶದಲ್ಲಿ ಪತ್ತೆಯಾಗಿವೆ. ಬಿಎಸ್‌ಎಫ್ ಯೋಧರು ಎಂದಿನಂತೆ ಕಛ್ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅವುಗಳು ಪತ್ತೆಯಾಗಿದ್ದವು. ಸಂಶಯಕ್ಕೆ ಈಡಾಗುವಂಥ ಯಾವುದೇ ವಸ್ತುಗಳು ಈ ಬೋಟ್‌ಗಳಲ್ಲಿ ಸಿಕ್ಕಿಲ್ಲ.

Advertisement

ಇದಾದ ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿರುಸಿನ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸರ್‌ ಕ್ರೀಕ್‌ ಪ್ರದೇಶದಲ್ಲಿರುವ ಪ್ರದೇಶವೇ ‘ಹರಾಮಿ ನಾಲಾ’. ಇಲ್ಲಿ ಯಾವತ್ತೂ ನೀರು ತುಂಬಿಕೊಂಡಿರುವ ಪ್ರದೇಶ. ಮೇ ತಿಂಗಳಲ್ಲಿ ಪಾಕಿಸ್ತಾನಕ್ಕೆ ಸೇರಿದ ಮೀನುಗಾರರ ಹಡಗನ್ನು ಬಿಎಸ್‌ಎಫ್ ವಶಪಡಿಸಿಕೊಂಡಿತ್ತು.

ಕರಾವಳಿಯಲ್ಲಿ ಹೈಅಲರ್ಟ್‌: ಇದೇ ವೇಳೆ ಕೇರಳದ ಕೊಚ್ಚಿಯಲ್ಲಿರುವ ನೌಕಾ ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಆರು ಮಂದಿ ಲಷ್ಕರ್‌ ಉಗ್ರರು ತಮಿಳುನಾಡಿಗೆ ಪ್ರವೇಶಿಸಿದ್ದಾರೆ ಎಂಬ ಕೇಂದ್ರ ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇರಳ ಹಾಗೂ ತಮಿಳುನಾಡಿನ ಸಮುದ್ರ ಹಾಗೂ ಕರಾವಳಿಯುದ್ದಕ್ಕೂ ನಿಗಾ ವಹಿಸಿರುವುದಾಗಿ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ ದೇಗುಲಗಳು, ಮಸೀದಿಗಳು ಹಾಗೂ ಚರ್ಚ್‌ ಗಳು ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next