Advertisement

ಪಾಕ್‌ಗೆ ಮಾಹಿತಿ: ಯೋಧನ ಬಂಧನ

08:05 AM Nov 05, 2018 | Karthik A |

ಫಿರೋಜ್‌ಪುರ್‌: ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ನೊಂದಿಗೆ ರಹಸ್ಯ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರೊಬ್ಬರನ್ನು ರವಿವಾರ ಬಂಧಿಸಲಾಗಿದೆ. ಆರೋಪಿ ಶೇಖ್‌ ರಿಯಾಜುದ್ದೀನ್‌ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ರೇನ್‌ಪುರ ಗ್ರಾಮದವರಾಗಿದ್ದು, ಅವರು ಪಂಜಾಬ್‌ನ ಫಿರೋಜ್‌ಪುರ ವಲಯದ ಬಿಎಸ್‌ಎಫ್ನ 29ನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದರು.

Advertisement

2017ರಿಂದಲೂ ರಿಯಾಜುದ್ದೀನ್‌ ಪಾಕ್‌ ಏಜೆಂಟ್‌ ಮಿರ್ಜಾ ಫೈಸಲ್‌ನಿಗೆ ಭಾರತದ ಗಡಿ ರಸ್ತೆಗಳು, ಗಡಿ ಬೇಲಿಗಳು, ಬಿಎಸ್‌ಎಫ್ನ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಸಹಿತ ಹಲವು ರಹಸ್ಯ ಮಾಹಿತಿಗಳನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next