Advertisement

ಪಾಕಿಸ್ತಾನ ಡ್ರೋನ್‌ ಹೊಡೆದುರುಳಿಸಿದ ಯೋಧರು

09:01 PM Apr 29, 2022 | Team Udayavani |

ಅಮೃತಸರ: ಪಾಕಿಸ್ತಾನದಿಂದ ಭಾರತದ ಭೂ ಭಾಗಕ್ಕೆ ಬರುತ್ತಿದ್ದ ಡ್ರೋನ್‌ ಅನ್ನು ಗಡಿ ಭದ್ರತಾ ಪಡೆ( (ಬಿಎಸ್‌ಎಫ್)ಯ ಯೋಧರು ಶುಕ್ರವಾರ ಹೊಡೆದುರುಳಿಸಿದ್ದಾರೆ.

Advertisement

ಪಂಜಾಬ್‌ನ ಅಮೃತಸರದ ಧನೋಯ್‌ ಕಾಲನ್‌ ಗ್ರಾಮದಲ್ಲಿ ಮಧ್ಯ ರಾತ್ರಿ 1.15ರ ಸಮಯಕ್ಕೆ ಡ್ರೋನ್‌ ಹಾರಾಟ ನಡೆಸುತ್ತಿರುವ ಸದ್ದು ಯೋಧರಿಗೆ ಕೇಳಿಸಿದೆ.

ತಕ್ಷಣ ಅವರು ಡ್ರೋನ್‌ನತ್ತ ಗುಂಡು ಹಾರಿಸಿ, ಅದನ್ನು ಹೊಡೆದುರುಳಿಸಿದ್ದಾರೆ. ಬೆಳಗ್ಗೆ ಪರಿಶೀಲನೆ ನಡೆಸಿದಾಗ ಅದು ಚೀನಾ ನಿರ್ಮಿತ “ಡಿಜೆಐ ಮ್ಯಾಟ್ರಿಸ್‌-300′ ಡ್ರೋನ್‌ ಎನ್ನುವುದು ತಿಳಿದುಬಂದಿದೆ. ಸ್ಥಳದಲ್ಲಿ ಯೋಧರು ಮತ್ತು ಪೊಲೀಸರು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ತರ್ನ್ ತರನ್‌ ಜಿಲ್ಲೆಯಲ್ಲಿ ಡ್ರೋನ್‌ ಒಂದು ಕೆಳಗಿಳಿಸಿದ್ದ 4ಕೆಜಿ ಹೆರಾಯಿನ್‌ ಅನ್ನು ಗಡಿ ಭದ್ರತಾ ಪಡೆಯ ಯೋಧರು ವಶ ಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next