ಮುಂಬಯಿ : ಮೂರು ದಿನಗಳ ನಿರಂತರ ಸೋಲಿನ ಹಾದಿಯನ್ನು ಕ್ರಮಿಸಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 97.39 ಅಂಕಗಳ ಮುನ್ನಡೆಯೊಂದಿಗೆ 34,474.38 ಅಂಕಗಳ ಮಟ್ಟದಲ್ಲಿ ಮುಗಿಸಿರುವುದು ಹೂಡಿಕೆದಾರರು ಮತ್ತು ವಹಿವಾಟುದಾರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ನೀಡಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 31.60 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು ದಿನದ ವಹಿವಾಟನ್ನು 10,348.05 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಏರುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ, ಬಲಿಷ್ಠವಾಗುತ್ತಿರುವ ಡಾಲರ್, ನಿರಂತರವಾಗಿ ಸಾಗಿರುವ ವಿದೇಶ ಬಂಡವಾಳದ ಹೊರ ಹರಿವು, ಕುಸಿಯುತ್ತಿರುವ ರೂಪಾಯಿ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರುಪೇಟೆ ಈಚಿನ ದಿನಗಳಲ್ಲಿ ಭಾರೀ ಅಲ್ಲೋಲ ಕಲ್ಲೋಲ ಕಾಣುತ್ತಿದೆ. ಆದಾಗ್ಯೂ ಇಂದಿನ ಏರಿಕೆ ಸಮಾಧಾನಕರವಾಗಿದೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,841 ಕಂಪೆನಿಗಳ ಶೇರುಗಳು ವಹಿವಟಿಗೆ ಒಳಪಟ್ಟವು; ಈ ಪೈಕಿ ಕೇವಲ 734 ಶೇರುಗಳು ಮುನ್ನಡೆ ಕಂಡವು; 1,910 ಶೇರುಗಳು ಹಿನ್ನಡೆಗೆ ಗುರಿಯಾದವು; 197 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಇಂದಿನ ಟಾಪ್ ಗೇನರ್‌ಗಳು : ಎಚ್ ಪಿ ಸಿ ಎಲ್, ಎಸ್ ಬ್ಯಾಂಕ್, ರಿಲಯನ್ಸ್, ಕೋಟಕ್ ಮಹೀಂದ್ರ, ಹೀರೋ ಮೋಟೋಕಾರ್ಪ್; ಟಾಪ್ ಲೂಸರ್‌ಗಳು : ವೇದಾಂತ, ಹಿಂಡಾಲ್ಕೊ, ಟೆಕ್ ಮಹೀಂದ್ರ, ಎಚ್ ಡಿ ಎಫ್ ಸಿ, ವಿಪ್ರೋ.