ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಬ್ಲೂ ಚಿಪ್ ಕಂಪೆನಿಗಳ ಶೇರುಗಳ ಖರೀದಿಯಲ್ಲಿ ಆಸಕ್ತಿ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟಿನಲ್ಲಿ 54 ಅಂಕಗಳ ಜಿಗಿತವನ್ನು ಸಾಧಿಸಿದೆ.
ಐಟಿ, ಟೆಕ್, ಹೆಲ್ತ್ ಕೇರ್ ಮತ್ತು ಕನ್ಸೂಮರ್ ಡ್ಯುರೇಬಲ್ ಕ್ಷೇತ್ರದ ಶೇರುಗಳು ಇಂದು ಉತ್ತಮ ಖರೀದಿಯನ್ನು ಕಂಡು ಶೇ.0.86 ಏರಿಕೆಯನ್ನು ದಾಖಲಿಸಿದವು.
ಹಾಗಿದ್ದರೂ ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 25.32 ಅಂಕಗಳ ಕುಸಿತವನ್ನು ಕಂಡು 35,464. 72ರ ಮಟ್ಟಕ್ಕೆ ಕುಸಿಯಿತು; ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 25.40 ಅಂಕಗಳ ನಷ್ಟಕ್ಕೆ ಗುರಿಯಾಗಿ 10,743.80 ಅಂಕಗಳ ಮಟ್ಟಕ್ಕೆ ಇಳಿಯಿತು.
ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟೆಕ್ ಮಹೀಂದ್ರ, ಭಾರ್ತಿ ಇನ್‌ಫ್ರಾಟೆಲ್, ಎಚ್ ಯು ಎಲ್, ಟಿಸಿಎಸ್, ಎಚ್‌ಸಿಎಲ್ ಟೆಕ್. ಟಾಪ್ ಲೂಸರ್‌ಗಳು : ಬಿಪಿಸಿಎಲ್, ಎಚ್‌ಪಿಸಿಎಲ್, ಗೇಲ್, ಅಲ್‌ಟ್ರಾ ಟೆಕ್ ಸಿಮೆಂಟ್, ಐಡಿಯಾ ಸೆಲ್ಯುಲರ್.
ಡಾಲರ್ ಎದುರು ರೂಪಾಯಿ ಇಂದು 30 ಪೈಸೆ ಕುಸಿದು 19 ತಿಂಗಳ ಕನಿಷ್ಠ ಮಟ್ಟವಾಗಿ 68.54 ರೂ. ಮಟ್ಟಕ್ಕೆ ಇಳಿಯಿತು. 2016ರ ನ.29ರ ಬಳಿಕದಲ್ಲಿ ರೂಪಾಯಿ ಕಂಡಿರುವ ಅತ್ಯಂತ ತಳ ಮಟ್ಟ ಇಂದಿನದ್ದಾಗಿದೆ.