Advertisement

ಪ್ರಪಾತಕ್ಕೆ ಬಿದ್ದು ಎದ್ದ ಮುಂಬಯಿ ಶೇರು 138 ಅಂಕ ಏರಿಕೆ

04:09 PM Dec 18, 2017 | |

ಮುಂಬಯಿ : ಗುಜರಾತ್‌, ಹಿಮಾಚಲ ಪ್ರದೇಶ ಚುನಾವಣಾ ಮತ ಎಣಿಕೆಯ  ಅನಿರೀಕ್ಷಿತ ಆರಂಭಿಕ ಟ್ರೆಂಡ್‌ಗಳಿಂದ ನಲುಗಿ ತನ್ನ  ಆರಂಭಿಕ ವಹಿವಾಟಿನಲ್ಲಿ  867 ಅಂಕಗಳ ಮಹಾ ಪ್ರಪಾತಕ್ಕೆ ಬಿದ್ದ ಮುಂಬಯಿ ಶೇರು ಪೇಟೆ, ಅನಂತರ ಬಿಜೆಪಿ ಪರವಾಗಿ ಮತ ಎಣಿಕೆ ಟ್ರೆಂಡ್‌ ಕಂಡು ಬರತೊಡಗಿದಂತೆಯೇ ನಿಧಾನವಾಗಿ ಚೇತರಿಸಿಕೊಂಡು ಇಂದು ಸೋಮವಾರದ ವಹಿವಾಟನ್ನು ಕೊನೆಗೂ 138.71 ಅಂಕಗಳ ಲಾಭದೊಂದಿಗೆ 33,601.68 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 55.50 ಅಂಕಗಳ ಲಾಭದೊಂದಿಗೆ ದಿನದ ವಹಿವಾಟನ್ನು 10,388.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ 1,477 ಶೇರುಗಳು ಮುನ್ನಡೆ ಸಾಧಿಸಿದವು; 1,190 ಶೇರುಗಳು ಹಿನ್ನಡೆಗೆ ಗುರಿಯಾದವು. 

ಇಂದಿನ ಟಾಪ್‌ ಗೇನರ್‌ಗಳು: ವೇದಾಂತ, ಹಿಂಡಾಲ್ಕೊ, ಸಿಪ್ಲಾ, ಮಹೀಂದ್ರ, ಸನ್‌ ಫಾರ್ಮಾ; ಟಾಪ್‌ ಲೂಸರ್‌ಗಳು  : ಎಸ್‌ ಬ್ಯಾಂಕ್‌, ಟೆಕ್‌ ಮಹೀಂದ್ರ, ಎಚ್‌ಪಿಸಿಎಲ್‌, ಕೋಲ್‌ ಇಂಡಿಯಾ, ಯುಪಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next