Advertisement

ದಾಖಲೆ ಮಟ್ಟದ ದಿನಾಂತ್ಯದ ಎತ್ತರ : ಮುಂಬಯಿ ಶೇರು 124 ಅಂಕ ಜಿಗಿತ

04:31 PM Jul 06, 2017 | |

ಮುಂಬಯಿ : ದಾಖಲೆ ಮಟ್ಟದ ದಿನಾಂತ್ಯದ ಎತ್ತರವನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 123.78 ಅಂಕಗಳ ಏರಿಕೆಯೊಂದಿಗೆ 31,369.34 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.95 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,674.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಎಸ್‌ಬಿಐ, ಐಟಿಸಿ, ರಿಲಯನ್ಸ್‌, ಎಚ್‌ಡಿಎಫ್ಸಿ, ಟಾಟಾ ಸ್ಟೀಲ್‌ ಶೇರುಗಳು ಇಂದು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು. 

ಟಾಪ್‌ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಎಸ್‌ಬಿಐ, ಐಟಿಸಿ, ಕೋಲ್‌ ಇಂಡಿಯಾ, ಭಾರ್ತಿ ಏರ್‌ಟೆಲ್‌.

ಟಾಪ್‌ ಲೂಸರ್‌ಗಳು : ಬಜಾಜ್‌ ಆಟೋ, ಈಶರ್‌ ಮೋಟರ್‌, ಐಡಿಯಾ ಸೆಲ್ಯುಲರ್‌, ಹಿಂಡಾಲ್ಕೊ, ಸನ್‌ ಫಾರ್ಮಾ. 

Advertisement
Advertisement

Udayavani is now on Telegram. Click here to join our channel and stay updated with the latest news.

Next