ಮುಂಬಯಿ : ಉತ್ತರ ಕೊರಿಯ ಉದ್ವಿಗ್ನತೆ ಮುಂದುವರಿದಿರುವ ಹೊರತಾಗಿಯೂ ಐರೋಪ್ಯ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ತೋರಿಬಂದಿದ್ದು ಶಾರ್ಟ್ ಕವರಿಂಗ್ ನಡೆದಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 107.30 ಅಂಕಗಳ ಮುನ್ನಡೆಯೊಂದಿಗೆ 31,809.55 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.35 ಅಂಕಗಳ ಮುನ್ನಡೆಯನ್ನು ಪಡೆದು ದಿನದ ವಹಿವಾಟನ್ನು 9952.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿನ ಹರಹು ಧನಾತ್ಮಕವಾಗಿತ್ತು. ಹಿನ್ನಡೆ ಕಂಡ ಪ್ರತೀ ಒಂದು ಶೇರಿಗೆ ಎರಡು ಶೇರುಗಳು ಮುನ್ನಡೆ ಸಾಧಿಸಿದವು. ರಿಲಯನ್ಸ್ ಶೇರು ನಿರಂತರ ಐದನೇ ದಿನವೂ ಮುನ್ನಡೆ ಸಾಧಿಸಿತು.
ಇಂದಿನ ಟಾಪ್ ಗೇನರ್‌ಗಳು : ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಅಲ್‌ಟ್ರಾ ಟೆಕ್ ಸಿಮೆಂಟ್, ಅಂಬುಜಾ ಸಿಮೆಂಟ್.
ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಸನ್ ಫಾರ್ಮಾ, ಭಾರ್ತಿ ಇನ್‌ಫ್ರಾಟೆಲ್, ಬಾಶ್.