ಮುಂಬಯಿ : ಅಮೆರಿಕ – ಚೀನ ನಡುವಿನ ವಾಣಿಜ್ಯ ಮಾತುಕತೆ ಆರಂಭಕ್ಕೆ ಮುನ್ನವೇ ಉಭಯ ದೇಶಗಳ ನಡುವಿನ ಆಮದು ಸುಂಕ ಏರಿಕೆ ವಿವಾದ ಪರಾಕಾಷ್ಠೆ ಮುಟ್ಟಿದೆ. ಪರಿಣಾಮವಾಗಿ ಜಾಗತಿಕ ಶೇರು ಮಾರುಕಟ್ಟೆಗಳು ಒತ್ತಡಕ್ಕೆ ಗುರಿಯಾಗಿವೆ. ಅಂತೆಯೇ ಮುಂಬಯಿ ಶೇರು ಮಾರುಕಟ್ಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 80 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಕಳೆದ ನಾಲ್ಕು ದಿನಗಳ ನಿರಂತರ ಲಾಭಕರ ಹಾದಿಯಲ್ಲಿ ಸಾಗಿ ಬಂದಿದ್ದ ಸೆನ್ಸೆಕ್ಸ್ ಒಟ್ಟು 675.15 ಅಂಕಗಳನ್ನು ಸಂಪಾದಿಸಿತ್ತು.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 137.33 ಅಂಕಗಳ ನಷ್ಟದೊಂದಿಗೆ 35,039.09 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 58.60 ಅಂಕಗಳ ನಷ್ಟದೊಂದಿಗೆ 10,659.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಿಸಿಎಸ್, ಎಕ್ಸಿಸ್ ಬ್ಯಾ,ಕ್, ಎಚ್‌ಸಿಎಲ್ ಟೆಕ್, ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಅದಾನಿ ಪೋರ್ಟ್; ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಐಡಿಯಾ ಸೆಲ್ಯುಲರ್, ಈಶರ್ ಮೋಟರ್, ಯುಪಿಸಿಎಲ್,ಎಚ್‌ಯುಎಲ್.
ಡಾಲರ್ ಎದುರು ಇಂದು ರೂಪಾಯಿ ವಿನಮಯ ದರ 13 ಪೈಸೆಯಷ್ಟು ಸುಧಾರಿಸಿ 66.53 ರೂ. ಮಟ್ಟಕ್ಕೆ ಏರಿತು. ಈ ವರ್ಷ ಬಡ್ಡಿ ದರ ಏರಿಕೆಗೆ ಅವಕಾಶ ಇದೆ ಎಂದು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಹೇಳಿರುವುದು ರೂಪಾಯಿ ಬಲವರ್ಧನೆಗೆ ಕಾರಣವಾಯಿತು.