ಮುಂಬಯಿ : ಸೆನ್ಸೆಕ್ಸ್ ಇಂದು ಬೆಳಗ್ಗೆ ಏಳು ತಿಂಗಳಲ್ಲೇ ಗರಿಷ್ಠ ಎನಿಸುವ 33,000 ಅಂಕಗಳ ಮಟ್ಟವನ್ನು ಪರೀಕ್ಷಿಸಿತು. ಮೌಲ್ಯಯತ ಶೇರುಗಳ ಖರೀದಿಯಲ್ಲಿ ಹೂಡಿಕೆದಾರರು ಆಸಕ್ತಿ ತೋರಿದ ಪರಿಣಾಮವಾಗಿ ಸೆನ್ಸೆಕ್ಸ್ ಈ ಸಾಧನೆ ಮಾಡಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಚೇತರಿಸಿಕೊಂಡದ್ದು, ಜಾಗತಿಕ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವುದು ಮತ್ತು ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟದ ಏರಿಕೆಯನ್ನು ಅರಗಿಸಿಕೊಂಡಿರುವುದು ಇಂದಿನ ಗಮನಾರ್ಹ ವಿಷಯವೆನಿಸಿತು.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 7.23 ಅಂಕಗಳ ನಷ್ಟದೊಂದಿಗೆ 33,026.33 ಅಂಕಗಳ ನಷ್ಟದೊಂದಿಗೆ 33,026.33 ಅಂಕಗಳಲ್ಲೂ, ನಿಫ್ಟಿ 8.20 ಅಂಕಗಳ ನಷ್ಟದೊಂದಿಗೆ 10,126.80 ಅಂಕಗಳ ಮಟ್ಟದಲ್ಲೂ ವ್ಯವ್ಯಹರಿಸುತ್ತಿತ್ತು.
ಭಾರ್ತಿ ಇನ್‌ಫ್ರಾಟೆಲ್, ಎಸ್‌ಬಿಐ, ಸನ್ ಫಾರ್ಮಾ, ಎಕ್ಸಿಸ್ ಬ್ಯಾಂಕ್, ಟಾಟಾ ಮೋಟರ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗಿನ ಟಾಪ್ ಗೇನರ್‌ಗಳು :
ಹೀರೋ ಮೋಟೋಕಾರ್ಪ್, ಎನ್‌ಟಿಪಿಸಿ, ಯುಪಿಎಲ್, ಲೂಪಿನ್, ಅಂಬುಜಾ ಸಿಮೆಂಟ್ಸ್ .
ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್,ಬಿಪಿಸಿಎಲ್, ಇಂಡಸ್‌ಇಂಡ್ ಬ್ಯಾಂಕ್, ಬಿಪಿಸಿಎಲ್, ಟಿಸಿಎಸ್.