ಮುಂಬಯಿ : ಅಮೆರಿಕ-ಚೀನ ವಾಣಿಜ್ಯ ವಿವಾದ ತೀವ್ರಗೊಳ್ಳತೊಡಗಿರುವಂತೆಯೇ ಏಶ್ಯನ್ ಮತ್ತು ಐರೋಪ್ಯ ಶೇರು ಮಾರುಕಟ್ಟೆಗಳಲ್ಲಿ ಆತಂಕದ ಮಾರಾಟ ಜೋರಾಗಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 262 ಅಂಕಗಳ ನಷ್ಟದೊಂದಿಗೆ ಎರಡು ವಾರಗಳ ಕನಿಷ್ಠವಾಗಿ 35,286.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಸೋಮವಾರ ಸೆನ್ಸೆಕ್ಸ್ 73.88 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 89.40 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,710.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಹೂಡಿಕೆದಾರರು ನಿನ್ನೆ ಸೋಮವಾರದ ವಹಿವಾಟಿನಲ್ಲಿ 754.43 ಕೋಟಿ ರೂ. ಶೇರುಗಳನ್ನು ಮಾರಿದರು. ಆದರೆ ದೇಶೀಯ ಹೂಡಿಕೆದಾರರು 824.10 ಕೋಟಿ ರೂ. ಶೇರುಗಳನ್ನು ಖರೀದಿಸಿದರು.
ಇಂದಿನ ವಹಿವಾಟಿನಲ್ಲಿ ಒಟ್ಟು 2,776 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 703 ಶೇರುಗಳು ಮುನ್ನಡೆ ಸಾಧಿಸಿದವು; 1,923 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.