ಮುಂಬಯಿ : ಅಮೆರಿಕ – ಚೀನ ನಡುವೆ ಮತ್ತೆ ವಾಣಿಜ್ಯ ಸಮರ ಸ್ಫೋಟಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 214 ಅಂಕಗಳ ಕುಸಿತವನ್ನು ಅನುಭವಿಸಿತು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ಚಿಲ್ಲರೆ ಹೂಡಿಕೆದಾರರಿಂದ ನಿರಂತರ ಶೇರು ಮಾರಾಟದ ಕಾರಣ ಮುಂಬಯಿ ಶೇರು ಪೇಟೆ ಕುಸಿತದ ಹಾದಿಯನ್ನು ಹಿಡಿದಿದೆ ಎಂದು ಪರಿಣತರು ಹೇಳಿದ್ದಾರೆ.
ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 178.88 ಅಂಕಗಳ ನಷ್ಟದೊಂದಿಗೆ 34,770.36 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 58.90 ಅಂಕಗಳ ನಷ್ಟದೊಂದಿಗೆ 10,574.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಐದು ಪೈಸೆ ಕುಸಿದು 67.91 ರೂ. ಮಟ್ಟಕ್ಕೆ ಇಳಿಯಿತು.
ಇಂದು ಬೆಳಗ್ಗಿನ ಟಾಪ್ ಗೇನರ್‌ಗಳು : ಕೋಲ್ ಇಂಡಿಯಾ, ಮಹೀಂದ್ರ, ಪವರ್ ಗ್ರಿಡ್, ಎನ್‌ಟಿಪಿಸಿ, ಯುಪಿಎಲ್. ಟಾಪ್ ಲೂಸರ್‌ಗಳು : ಹಿಂಡಾಲ್ಕೊ, ಎಚ್‌ಪಿಸಿಎಲ್ ಐಸಿಐಸಿಐ ಬ್ಯಾಂಕ್, ಬಿಪಿಸಿಎಲ್, ಐಡಿಯಾ ಸೆಲ್ಯುಲರ್,