ಮುಂಬಯಿ : ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಮರ ತೀವ್ರಗೊಳ್ಳುತ್ತಿರುವಂತೆಯೇ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಎಚ್ಚರಿಕೆಯ ನಡೆ ತೋರಿ ಬಂದಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 148 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಮತ್ತು ಹೂಡಿಕೆದಾರರು ಮತ್ತು ವಹಿವಾಟುದಾರರಿಂದ ಆಗುತ್ತಿರುವ ಎಡೆಬಿಡದ ಲಾಭ ನಗದೀಕರಣದ ಕಾರಣ ಮುಂಬಯಿ ಶೇರು ಪೇಟೆ ಇಂದು ಹಿನ್ನಡೆಗೆ ಗುರಿಯಾಯಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 78.88 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.15ರ ಹೊತ್ತಿಗೆ 109.66 ಅಂಕಗಳ ನಷ್ಟದೊಂದಿಗೆ 35,438.60 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.20 ಅಂಕಗಳ ನಷ್ಟದೊಂದಿಗೆ 10,760.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಆಯಿಲ್ ಆ್ಯಂಡ್ ಗ್ಯಾಸ್, ಪವರ್, ರಿಯಲ್ಟಿ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳ ಶೇರುಗಳು ಇಂದು ಆರಂಭಿಕ ವಹಿವಾಟಿನಲ್ಲಿ ಹಿನ್ನಡೆಗೆ ಗುರಿಯಾದವು.
ವೇದಾಂತ, ಎಚ್‌ಯುಎಲ್, ಇನ್‌ಫೋಸಿಸ್, ಬಜಾಜ್ ಆಟೋ, ವಿಪ್ರೋ, ಕೋಲ್ ಇಂಡಿಯಾ, ಹೀರೋ ಮೋಟೋಕಾರ್ಪ್, ಎನ್‌ಟಿಪಿಸಿ, ಮಾರುತಿ ಸುಜುಕಿ, ಆರ್‌ಐಎಲ್, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಇಂಡಸ್ ಇಂಡ್ ಬ್ಯಾಂಕ್ ಶೇರುಗಳು ಇಂದು ಶೇ.1.64ರ ನಷ್ಟಕ್ಕೆ ಗುರಿಯಾದವು.
ಇಂದು ಡಾಲರ್‌ಎದುರು ರೂಪಾಯಿ 4 ಪೈಸೆಯಷ್ಟು ಕುಸಿತದು 68.03 ರೂ. ಮಟ್ಟಕ್ಕೆ ಇಳಿಯಿತು.