ಮುಂಬಯಿ : ತೈಲ ಬೆಲೆ ಕುಸಿತವನ್ನು ಕಳವಳಕಾರಿಯಾಗಿ ಪರಿಗಣಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 63 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್ 81 ಅಂಕಗಳ ನಷ್ಟದೊಂದಿಗೆ 31,216.53 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.85 ಅಂಕಗಳ ನಷ್ಟದೊಂದಿಗೆ 9,616.65 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 45.85 ಡಾಲರ್‌ಗೆ ಇಳಿಯುವ ಮೂಲಕ ಅದು ಕಳೆದ ಏಳು ತಿಂಗಳ ಹೊಸ ತಳ ಮಟ್ಟವನ್ನು ಕಂಡಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ನಿರುತ್ಸಾಹದ ವಾತಾವರಣ ಹಾಗೂ ವಿದೇಶೀ ಬಂಡವಾಳದ ನಿರಂತರ ಹೊರ ಹರಿವಿನ ಪರಿಣಾಮವಾಗಿ ಹೂಡಿಕೆದಾರರು ಹಾಗೂ ವಹಿವಾಟುದಾರರು ಎಚ್ಚರಿಕೆಯ ನಡೆ ತೋರುತ್ತಿರುವುದು ಕಂಡು ಬಂತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಓಎನ್‌ಜಿಸಿ, ಲೂಪಿನ್, ಪವರ್ ಗ್ರಿಡ್, ಸಿಪ್ಲಾ, ಟಾಟಾ ಮೋಟರ್, ಎಚ್ ಡಿ ಎಫ್ ಹಿ ಶೇರುಗಳು ಶೇ.1.48ರಷ್ಟು ಕುಸಿದವು.