ಮುಂಬಯಿ : ಉತ್ತರ ಕೊರಿಯ ಹೊಸದಾಗಿ ಪರಮಾಣು ಪರೀಕ್ಷೆ ನಡೆಸಿರುವುದರಿಂದ ಅಂತಾರಾಷ್ಟ್ರೀಯ ರಂಗದಲ್ಲಿ ಹೆಚ್ಚಿರುವ ಉದ್ವಿಗ್ನತೆಯ ದುಷ್ಪರಿಣಾಮ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳಲ್ಲಿ ಆಗಿರುವಂತೆಯೇ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 72 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 119.30 ಅಂಕಗಳ ನಷ್ಟದೊಂದಿಗೆ 31,172.93 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.45 ಅಂಕಗಳ ಕುಸಿತದೊಂದಿಗೆ 9,037.95 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಕೋಲ್ ಇಂಡಿಯಾ, ಬಿಪಿಸಿಎಲ್, ರಿಲಯನ್ಸ್, ವೇದಾಂತ, ಮಾರುತಿ ಸುಜುಕಿ ಶೇರುಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಕೋಲ್ ಇಂಡಿಯಾ, ಬಿಪಿಸಿಎಲ್, ರಿಲಯನ್ಸ್, ವೇದಾಂತ, ಮಾರುತಿ ಸುಜುಕಿ ಶೇರುಗಳು ಉತ್ತಮ ಖರೀದಿ ಕಂಡವು.
ಟಾಪ್ ಲೂಸರ್‌ಗಳಾಗಿ ಅದಾನಿ ಪೋರ್ಟ್, ಏಶ್ಯನ್ ಪೇಂಟ್, ಟಾಟಾ ಪವರ್, ಅಂಬುಜಾ ಸಿಮೆಟ್ಸ್, ಭಾರ್ತಿ ಏರ್‌ಟೆಲ್ ಶೇರುಗಳು ನಿರಾಶೆ ಮೂಡಿಸಿದವು.