ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸ್ಥಿತಿ ನೆಲೆಸಿರುವುದನ್ನು ಅನುಲಕ್ಷಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 246 ಅಂಕಗಳ ಜಿಗಿತವನ್ನು ಸಾಧಿಸಿತು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡದ್ದು ಕೂಡ ಈ ಪರಿಯ ತೇಜಿಗೆ ಕಾರಣವಾಯಿತು.
ಮೇ ತಿಂಗಳ ವಾಯಿದೆ ವಹಿವಾಟು ಇತ್ಯರ್ಥವಾಗುವ ಅಂತಿಮ ದಿನವಾದ ಇಂದು ವಹಿವಾಟುದಾರರು ವ್ಯಾಪಕ ಶಾರ್ಟ್ ಕವರಿಂಗ್ ಗೆ ತೊಡಗಿಕೊಂಡದ್ದು ಕೂಡ ಸೆನ್ಸೆಕ್ಸ್ ತೇಜಿಗೆ ಕಾರಣವಾಯಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 259.37 ಅಂಕಗಳ ನಷ್ಟವನ್ನು ಅನುಭವಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ 116.38 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,022.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,647.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ, ಟಿಸಿಎಸ್, ಎಚ್ ಡಿ ಎಫ್ ಸಿ, ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಇಂದು ಹಚ್ಚು ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಆರು ಪೈಸೆ ಚೇತರಿಕೆಯನ್ನು ಕಂಡು 67.37 ರೂ. ಮಟ್ಟಕ್ಕೆ ತಲುಪಿರುವುದು ಸೆನ್ಸೆಕ್ಸ್ ಗೆ ಚೇತೋಹಾರಿಯಾಗಿತ್ತು.
ಇಂದಿನ ಟಾಪ್ ಗೇನರ್‌ಗಳು : ಒಎನ್‌ಜಿಸಿ, ಗೇಲ್, ಎಚ್ ಡಿ ಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರ, ಕೋಲ್ ಇಂಡಿಯಾ; ಟಾಪ್ ಲೂಸರ್‌ಗಳು : ಸನ್ ಫಾಮಾರ, ಐಸಿಐಸಿಐ ಬ್ಯಾಂಕ್, ಬಿಪಿಸಿಎಲ್, ಎಚ್‌ಪಿಸಿಎಲ್, ವೇದಾಂತ.