ಮುಂಬಯಿ : ಹಣದುಬ್ಬರವನ್ನು ಹದ್ದು ಬಸ್ತಿನಲ್ಲಿಡುವ ಉದ್ದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಆರ್‌ಬಿಐ ತನ್ನ ಪ್ರಮುಖ ಬಡ್ಡಿ ದರಗಳನ್ನು ಶೇ.0.25ರಷ್ಟು ಏರಿಸಿದ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 276 ಅಂಕಗಳ ಉತ್ತಮ ಜಿಗಿತದೊಂದಿಗೆ 35,000 ಅಂಕಗಳ ಗಡಿಯನ್ನು ದಾಟಿ ವಿಜೃಂಭಿಸಿಸಿತು.
ಆರ್‌ಬಿಐ ಇಂದು ಹಾಲಿ ಹಣಕಾಸು ಸಾಲಿನ ಎರಡನೇ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಶೇ.0.25ರಷ್ಟು ಹೆಚ್ಚಿಸಿ ಅನುಕ್ರಮವಾಗಿ ಶೇ.6.25 ಮತ್ತು ಶೇ.6ಕ್ಕೆ ನಿಗದಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 91.50 ಅಂಕಗಳ ಮುನ್ನಡೆಯನ್ನು ಸಾಧಿಸಿ 10,684.65 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನಗೊಳಿಸಿತು.
ಕಳೆದ ಮೂರು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ ಸೆನ್ಸೆಕ್ಸ್ ಒಟ್ಟು 419.17 ಅಂಕಗಳ ನಷ್ಟವನ್ನು ಕಂಡಿತ್ತು.
Related Articles
ನಿನ್ನೆ ಮಂಗಳವಾರದ ವಹಿವಾಟಿನಲ್ಲಿ ದೇಶೀಯ ಹೂಡಿಕೆದಾರ ಸಂಸ್ಥೆಗಳು 473.33 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದ್ದರು. ವಿದೇಶಿ ಹೂಡಿಕೆದಾರರು 157.51 ಕೋಟಿ ರೂ. ಶೇರುಗಳನ್ನು ಮಾರಿದ್ದರು.