ಮುಂಬಯಿ : 2019ರ ಲೋಕಸಭಾ ಚುನಾವಣೆ ವೇಳಾ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಆರಂಭವಾಗಿರುವ ಮತದಾನಪೂರ್ವ ರಾಲಿಯ ಪರಿಣಾಮವಾಗಿ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 233 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿತು.
ಏಶ್ಯನ್ ಶೇರು ಪೇಟೆಗಳಲ್ಲಿ ಉತ್ತಮ ತೇಜಿ ಕಂಡು ಬಂದಿರುವುದು, ಡಾಲರ್‌ಎದುರು ರೂಪಾಯಿ ಬಲಗೊಂಡಿರುವುದೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಇಂದು ಭರ್ಜರಿ ಏರಿಕೆಯನ್ನು ದಾಖಲಿಸಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 298.38 ಅಂಕಗಳ ಏರಿಕೆಯೊಂದಿಗೆ 36,969.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 101.10 ಅಂಕಗಳ ಏರಿಕೆಯೊಂದಿಗೆ 11,136.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಟಿಸಿಎಸ್, ಕೋಲ್ ಇಂಡಿಯಾ, ಎಸ್‌ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಸಕ್ರಿಯವಾಗಿದ್ದವು.
ಟಾಪ್ ಗೇನರ್‌ಗಳು : ಎಚ್‌ಪಿಸಿಎಲ್, ಬಿಪಿಸಿಎಲ್, ಭಾರ್ತಿ ಇನ್‌ಫ್ರಾಟೆಲ್, ಕೋಲ್ ಇಂಡಿಯಾ, ವೇದಾಂತ; ಟಾಪ್ ಲೂಸರ್‌ಗಳು : ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್, ಸಿಪ್ಲಾ, ಟೆಕ್ ಮಹೀಂದ್ರ, ಕೋಟಕ್ ಮಹೀಂದ್ರ.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 15 ಪೈಸೆಗಳ ಏರಿಕೆಯನ್ನು ದಾಖಲಿಸಿ 69.99 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.