Advertisement

ಮೇ ವಾಯಿದೆ ವಹಿವಾಟಿಗೆ ಭರ್ಜರಿ ಆರಂಭ: ಸೆನ್ಸೆಕ್ಸ್‌ 263 ಅಂಕ ಜಂಪ್‌

11:30 AM Apr 27, 2018 | |

ಮುಂಬಯಿ : ಮೇ ತಿಂಗಳ ವಾಯಿದೆ ವಹಿವಾಟಿಗೆ ಭರ್ಜರಿ ಆರಂಭ ನೀಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ನಿರಂತರ ಎರಡನೇ ದಿನದ ಏರುಗತಿಯಲ್ಲಿ 180 ಅಂಕಗಳ ಜಿಗಿತವನ್ನು ಸಾಧಿಸಿತು. 

Advertisement

ಪ್ರಮುಖ ಕಂಪೆನಿಗಳ ತ್ತೈಮಾಸಿಕ ಫ‌ಲಿತಾಂಶಗಳು ಉತ್ತೇಜನಕಾರಿಯಾಗಿರುವ ಹಿನ್ನೆಲೆಯಲ್ಲಿ ಮತ್ತು ಏಶ್ಯನ್‌ ಶೇರು ಪೇಟೆಗಳಲ್ಲಿ ಆಶಾದಾಯಕ ವಾತಾವರಣ ನೆಲೆಗೊಂಡಿರುವ ಕಾರಣ, ಮುಂಬಯಿ ಶೇರು ಇಂದು ಉತ್ತಮ ತೇಜಿಯನ್ನು ಕಂಡಿತು. 

ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್‌ 262.81 ಅಂಕಗಳ ಮುನ್ನಡೆಯೊಂದಿಗೆ 34,976.41 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 73.20 ಅಂಕಗಳ ಮುನ್ನಡೆಯೊಂದಿಗೆ 10,691.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಎಕ್ಸಿಸ್‌ ಬ್ಯಾಂಕ್‌, ಎಸ್‌ ಬ್ಯಾಂಕ್‌, ರಿಲಯನ್ಸ್‌, ಮಾರುತಿ ಸುಜುಕಿ,ಎಸ್‌ಬಿಐ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು. ರಿಲಯನ್ಸ್‌ ಮಾರುತಿ ಸುಜುಕಿ ಇಂದು ತಮ್ಮ ತ್ತೈಮಾಸಿಕ ಫ‌ಲಿತಾಂಶ ಪ್ರಕಟಿಸಲಿದ್ದು ಅದಕ್ಕೆ ಮುನ್ನವೇ ಅವುಗಳ ಶೇರು ಧಾರಣೆ ಅನುಕ್ರಮವಾಗಿ ಶೇ.2.66 ಮತ್ತು ಶೇ.1.28ರಷ್ಟು ಏರಿದವು. 

Advertisement

Udayavani is now on Telegram. Click here to join our channel and stay updated with the latest news.

Next