ಮುಂಬಯಿ : ಬ್ಯಾಂಕ್, ತೈಲ ಹಾಗೂ ಲೋಹದ ರಂಗದ ಶೇರುಗಳಲ್ಲಿನ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 267.41 ಅಂಕಗಳ ನಷ್ಟದೊಂದಿಗೆ 29,858.80 ಅಂಕಗಳ ಮಟ್ಟದಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 74.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,285.30 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಏಶ್ಯನ್ ಪೇಂಟ್ಸ್, ಎಸ್‌ಬಿಐ, ಅರಬಿಂದೋ ಫಾರ್ಮಾ ಮತ್ತು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು. ಟಾಟಾ ಮೋಟರ್, ಓಎನ್‌ಜಿಸಿ ಮತ್ತು ಹಿಂಡಾಲ್ಕೊ ಟಾಪ್ ಲೂಸರ್ ಎನಿಸಿಕೊಂಡವು.
ಡಿ ಮಾರ್ಟ್ ರೀಟೇಲ್ ಆಪರೇಟರ್ ಆಗಿರುವ ಅವೆನ್ಯೂ ಸೂಪರ್ ಮಾರ್ಟ್ ಕಂಪೆನಿಯ ಶೇರು ಇಂದು ದಾಖಲೆಯ 814 ರೂ. ಧಾರಣೆಯನ್ನು ಕಂಡಿತು. ಮೇ 6ರಂದು ಈ ಕಂಪೆನಿಯ ಮೊದಲ ತ್ತೈಮಾಸಿಕದ ಫಲಿತಾಂಶ ಪ್ರಕಟವಾಗಲಿದೆ.
ಇಂದಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಎಕ್ಸಿಸ್ ಬ್ಯಾಂಕ್, ರಿಲಯನ್ಸ್.