Advertisement

ಲಾಭ ನಗದಿಕರಣ: ಮುಂಬಯಿ ಶೇರು 97 ಅಂಕ ಕುಸಿತ

10:45 AM Nov 06, 2017 | udayavani editorial |

ಮುಂಬಯಿ: ವಹಿವಾಟುದಾರರು ಮತ್ತು ಹೂಡಿಕೆದಾರರು ಈಚಿನ ಲಾಭವನ್ನು ನಗದೀಕರಿಸಲು ಭರಾಟೆಯ ಮಾರಾಟಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 97 ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌  ಸ್ವಲ್ಪ ಮಟ್ಟಿನ ಚೇತರಿಕೆ ಕಂಡು 19.48 ಅಂಕಗಳ ನಷ್ಟದೊಂದಿಗೆ 33,666.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 12.10 ಅಂಕಗಳ ನಷ್ಟದೊಂದಿಗೆ 10,440.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 14 ಪೈಸೆಗಳ ಕುಸಿತವನ್ನು ಕಂಡು 64.69 ರೂ. ವಿನಿಮಯ ದರಕ್ಕೆ ನಿಗದಿಗೊಂಡಿತು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಟಾಟಾ ಮೋಟರ್‌, ಎಸ್‌ಬಿಐ, ಭಾರ್ತಿ ಏರ್‌ಟೆಲ್‌, ಎಕ್ಸಿಸ್‌ ಬ್ಯಾಂಕ್‌ ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ಟಾಪ್‌ ಗೇನರ್‌ಗಳು : ಮಹೀಂದ್ರ ಮಹೀಂದ್ರ, ಭಾರ್ತಿ ಇನ್‌ಫ್ರಾಟೆಲ್‌, ಟಾಟಾ ಮೋಟರ್‌, ಒಎನ್‌ಜಿಸಿ, ಟಾಟಾ ಪವರ್‌.

Advertisement

ಟಾಪ್‌ ಲೂಸರ್‌ಗಳು : ಐಡಿಯಾಸೆಲ್ಯುಲರ್‌, ಎಚ್‌ಪಿಸಿಎಲ್‌. ಬಿಪಿಸಿಎಲ್‌, ಭಾರ್ತಿ ಏರ್‌ಟೆಲ್‌, ಹಿಂಡಾಲ್ಕೋ.

Advertisement

Udayavani is now on Telegram. Click here to join our channel and stay updated with the latest news.

Next