ಮುಂಬಯಿ : ಆಗಸ್ಟ್ ತಿಂಗಳ ವಾಯಿದೆ ವಹಿವಾಟಿನ ಆರಂಭದ ದಿನವಾದ ಇಂದು ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 190 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಮೆಟಲ್, ಹೆಲ್ತ್ ಕೇರ್, ಬ್ಯಾಂಕ್, ರಿಯಲ್ಟಿ, ಟೆಕ್ನಾಲಜಿ, ಆಟೋ, ಪವರ್ ಮತ್ತು ಐಟಿ ಶೇರುಗಳು ಇಂದು ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾದವು.
ಬೆಳಗ್ಗೆ 10.45 ಹೊತ್ತಿಗೆ ಸೆನ್ಸೆಕ್ಸ್ 139.33 ಅಂಕಗಳ ನಷ್ಟದೊಂದಿಗೆ 32,243.97 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.35 ಅಂಕಗಳ ನಷ್ಟದೊಂದಿಗೆ 9,986.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಡಾ. ರೆಡ್ಡಿ, ರಿಲಯನ್ಸ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್,ಗೇಲ್, ಅದಾನಿ ಪೋರ್ಟ್, ಎಸಿಸಿ ಶೇರುಗಳು ಕಾಣಿಸಿಕೊಂಡವು; ಟಾಪ್ ಲೂಸರ್‌ಗಳಾಗಿ ಡಾ. ರೆಡ್ಡಿ ಲ್ಯಾಬ್, ಲೂಪಿನ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಎಚ್‌ಯುಎಲ್ ಶೇರುಗಳು ಕಾಣಿಸಿಕೊಂಡವು.