Advertisement

ಕರ್ನಾಟಕದ ಅಸ್ಥಿರತೆ : ಮುಂಬಯಿ ಶೇರು 156 ಅಂಕ ಕುಸಿತ

04:15 PM May 16, 2018 | |

ಮುಂಬಯಿ : ಕರ್ನಾಟಕದಲ್ಲಿ ಹೊಸ ಸರಕಾರ ರಚಿಸುವಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಿತತೆ  ತಲೆದೋರಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 156.04 ಅಂಕಗಳ ಕುಸಿತದೊಂದಿಗೆ 35,387.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 60.75 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,741.10 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿದೆ.

ನಿನ್ನೆ ಮಂಗಳವಾರ ಅಮೆರಿಕದ ವಾಲ್‌ ಸ್ಟ್ರೀಟ್‌ ನಷ್ಟಕ್ಕೆ ಗುರಿಯಾದುದನ್ನು ಅನುಸರಿಸಿ ಇಂದು ಏಶ್ಯನ್‌ ಮಾರುಕಟ್ಟೆಗಳಲ್ಲಿ ನಿರುತ್ತೇಜನ ಮಡುಗಟ್ಟಿತ್ತು. ಅಂತೆಯೇ ಮುಂಬಯಿ ಶೇರು ಪೇಟೆ ಕೂಡ ಕುಸಿತದೊಂದಿಗೆ ದಿನದ ವಹಿವಾಟನ್ನು ಆರಂಭಿಸಿತ್ತು. 

ಇಂದು ಮುಂಬಯಿ ಶೇರುಪೇಟೆಯಲ್ಲಿ ಒಟ್ಟು 2,757 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,016 ಶೇರುಗಳು ಮುನ್ನಡೆ ಸಾಧಿಸಿದವು; 1,606 ಶೇರುಗಳು ಹಿನ್ನಡೆಗೆ ಗುರಿಯಾದವು; 135 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next