ಮುಂಬಯಿ : ಎಪ್ರಿಲ್ ತಿಂಗಳ ವಾಯಿದೆ ವಹಿವಾಟು ನಾಳೆ ಗುರುವಾರ ಚುಕ್ತಾ ಆಗಲಿರುವುದಕ್ಕೆ ಮುನ್ನವೇ ಇಂದು ಬುಧವಾರ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಲಾಭ ನಗದೀಕರಣದ ಒತ್ತಡಕ್ಕೆ ಗುರಿಯಾಗಿ ದಿನಾಂತ್ಯಕ್ಕೆ 115.37 ಅಂಕಗಳ ನಷ್ಟವನ್ನು ಅನುಭವಿಸಿ 34,501.27 ಅಂಕಗಳ ಮಟ್ಟಕ್ಕೆ ಕುಸಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 43.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,570.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ಲಾಭದ ಹಾದಿಯಲ್ಲಿ ಸೆನ್ಸೆಕ್ಸ್ 201.06 ಅಂಕಗಳನ್ನು ಸಂಪಾದಿಸಿತ್ತು.
ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಟಿಸಿಎಸ್, ಮಹೀಂದ್ರ, ಎಚ್‌ಸಿಎಲ್ ಟೆಕ್, ಬಿಪಿಸಿಎಲ್; ಟಾಪ್ ಲೂಸರ್‌ಗಳು : ಗೇಲ್, ಎಚ್‌ಪಿಸಿಎಲ್, ವೇದಾಂತ, ಹಿಂಡಾಲ್ಕೋ, ಟಾಟಾ ಸ್ಟೀಲ್.
ಮುಂಬಯಿ ಶೇರು ಪೇಟೆಯಲ್ಲಿಂದು ವಹಿವಾಟಿಗೆ ಒಳಪಟ್ಟ ಕಂಪೆನಿಗಳು : 2,789. ಮುನ್ನಡೆ ಕಂಡವುಗಳು 898 ಶೇರುಗಳು, ಹಿನ್ನಡೆಗೆ ಗುರಿಯಾದವು 1,750, ಬದಲಾವಣೆ ಕಾಣದವು 141.