ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು, ನಿರಂತರ ಮೂರನೇ ದಿನದ ಏರಿಕೆಯಾಗಿ, 78 ಅಂಕಗಳ ಮುನ್ನಡೆಯೊಂದಿಗೆ 31,924.41 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಫಾರ್ಮಾ, ತೈಲ, ಅನಿಲ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ಇಂದಿನ ವಹಿವಾಟಿನಲ್ಲಿ ಉತ್ತಮ ಮುನ್ನಡೆ ಸಾಧಿಸಿದವು.
ಸೆ.21ರ ಬಳಿಕ ಇದೇ ಮೊದಲ ಬಾರಿಗೆಂಬಂತೆ ಇಂದು ಮಂಗಳವಾರ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.20 ಅಂಕಗಳ ಏರಿಕೆಯೊಂದಿಗೆ 10,000 ಅಂಕಗಳ ಮಟ್ಟವನ್ನು ದಾಟಿ ದಿನದ ವಹಿವಾಟನ್ನು 10,016.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳು : ಯುಪಿಎಲ್, ಲೂಪಿನ್, ಪವರ್ ಗ್ರಿಡ್, ಎಕ್ಸಿಸ್ ಬ್ಯಾಂಕ್, ಕೋಲ್ ಇಂಡಿಯಾ. ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್. ಈಶರ್ ಮೋಟರ್, ಅಂಬುಜಾ ಸಿಮೆಂಟ್ಸ್, ವೇದಾಂತ ಮತ್ತು ಟಾಟಾ ಸ್ಟೀಲ್.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,576 ಶೇರುಗಳು ಮುನ್ನಡೆ ಸಾಧಿಸಿದವು; 1,143 ಶೇರುಗಲು ಹಿನ್ನಡೆಗೆ ಗುರಿಯಾದವು; 127 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಬಿಎಸ್‌ಇಯಲ್ಲಿ ಇಂದು ವಹಿವಾಟು 3,878.69 ಕೋಟಿ ರೂ. ನಿನ್ನೆಯ ದಿನ ದಾಖಲಾಗಿದ್ದ ವಹಿವಾಟು ಪ್ರಮಾಣ 3,666..34 ಕೋಟಿ ರೂ.