ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ತನ್ನ ಸಾರ್ವಕಾಲಿಕ ದಾಖಲೆಯ ಎತ್ತರದಿಂದ ಹಿಂದೆ ಸರಿದು 106 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಪೇಟೆಗಳಲ್ಲಿ ತೋರಿ ಬಂದು ದೌರ್ಬಲ್ಯ ಮತ್ತು ಹೂಡಿಕೆದಾರರು ಹಾಗೂ ವಹಿವಾಟುದಾರರು ಈಚಿನ ಭರ್ಜರಿ ಏರಿಕೆಗಳಲ್ಲಿ ಮುನ್ನಡೆದಿದ್ದ ಶೇರುಗಳನ್ನು ಲಾಭನಗದೀಕರಣಕ್ಕಾಗಿ ಮಾರಲು ಮುಂದಾಗಿರುವುದು ಇಂದು ಶೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣವಾಯಿತು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 17 ಪೈಸೆಗಳ ಕುಸಿತವನ್ನು ಕಂಡು 68.85 ರೂ ಮಟ್ಟದಲ್ಲಿ ವ್ಯವಹಾರ ನಿರತವಾಯಿತು.
ಕಳೆದ ಎರಡು ದಿನಗಳ ನಿರಂತರ ಗೆಲುವಿನ ಓಟದಲ್ಲಿ 358.57 ಅಂಕಗಳನ್ನು ಗಳಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.30ರ ಸುಮಾರಿಗೆ ತನ್ನ ಆರಂಭಿಕ ನಷ್ಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿ 78.77 ಅಂಕಗಳ ಹಿನ್ನಡೆಯೊಂದಿಗೆ 37,945.60 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.80 ಅಂಕಗಳ ನಷ್ಟದೊಂದಿಗೆ 11,447.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಸ್ ಬ್ಯಾಂಕ್, ಈಚರ್ ಮೋಟರ್ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಈಚರ್ ಮೋಟರ್, ಎಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಯುಪಿಎಲ್, ಏಶ್ಯನ್ ಪೇಂಟ್. ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಸನ್ ಫಾರ್ಮಾ, ಎಸ್‌ಬಿಐ, ಕೋಲ್ ಇಂಡಿಯಾ, ಗ್ರಾಸಿಂ.