ಮುಂಬಯಿ : ಕಳೆದ ಶುಕ್ರವಾರದ ಕುಸಿತದ ಬಳಿಕ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ, ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಹೊಸ ಉತ್ತೇಜನವನ್ನು ಪಡೆದುಕೊಂಡು 93 ಅಂಕಗಳ ಚೇತರಿಕೆಯನ್ನು ಕಂಡಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಇಂದು ಸ್ಥಿರತೆಯ ಪ್ರವೃತ್ತಿ ತೋರಿ ಬಂದಿದ್ದು ಹೂಡಿಕೆದಾರರು ಆಯ್ದ ಬ್ಲೂ ಚಿಪ್ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯಲ್ಲಿ ಹೊಸ ಉತ್ಸಾಹ ಕಂಡು ಬಂತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 83.96 ಅಂಕಗಳ ಮುನ್ನಡೆಯೊಂದಿಗೆ 31,608.64 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.75 ಅಂಕಗಳ ಮುನ್ನಡೆಯೊಂದಿಗೆ 9,874.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇನ್‌ಫೋಸಿಸ್, ಎಸ್ ಬ್ಯಾಂಕ್, ಬಿಪಿಸಿಎಲ್, ಟಾಟಾ ಸ್ಟೀಲ್ , ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ವೇದಾಂತ, ಟಾಟಾ ಸ್ಟೀಲ್, ಹಿಂಡಾಲ್ಕೊ, ಒಎನ್‌ಜಿಸಿ, ಕೋಲ್ ಇಂಡಿಯಾ ಶೇರುಗಳು ಟಾಪ್ ಗೇರ್ ಎನಿಸಿಕೊಂಡಿದ್ದವು.
ಟಾಪ್ ಲೂಸರ್‌ಗಳಾಗಿ ಇನ್‌ಫೋಸಿಸ್, ಎಚ್‌ಯುಎಲ್, ಸಿಪ್ಲಾ, ಲೂಪಿನ್, ಸನ್ ಫಾರ್ಮಾ ಶೇರುಗಳು ಹಿನ್ನಡೆಗೆ ಗುರಿಯಾದವು.