Advertisement

30,000 ಅಂಕ ಮಟ್ಟ ಮರಳಿ ಸಂಪಾದಿಸಿದ ಮುಂಬಯಿ ಶೇರು ಮಾರುಕಟ್ಟೆ

11:49 AM May 04, 2017 | udayavani editorial |

ಮುಂಬಯಿ : ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ 180 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ 30,000 ಅಂಕಗಳ ಮಟ್ಟವನ್ನು ಮರಳಿ ಸಂಪಾದಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 9,350 ಅಂಕಗಳ ಮಟ್ಟವನ್ನು ತಲುಪಿತು. 

ಬೆಳಗ್ಗೆ 11.45ರ ಹೊತ್ತಿಗೆ ಸೆನ್ಸೆಕ್ಸ್‌ 175.17 ಅಂಕಗಳ ಏರಿಕೆಯೊಂದಿಗೆ 30,069.97 ಅಂಕಗಳ ಮಟ್ಟದಲ್ಲೂ, ನಿಫ್ಟಿ  28.05 ಅಂಕಗಳ ಏರಿಕೆಯೊಂದಿಗೆ 9.340.75 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು. 

ಉತ್ತಮ ಕಾರ್ಪೊರೇಟ್‌ ಗಳಿಕೆ, ಸರಕಾರದಿಂದ ನಿರಂತರವಾಗಿ ನಡೆಯುತ್ತಿರುವ ಆರ್ಥಿಕ ಸುಧಾರಣಾ ಕ್ರಮಗಳು, ಎನ್‌ಪಿಎ ನಿರ್ಧಾರಗಳು ಮತ್ತು ಉಕ್ಕು ನೀತಿ ಮುಂತಾಗಿ ಹಲವಾರು ಕಾರಣಗಳು ಶೇರು ಮಾರುಕಟ್ಟೆಯಲ್ಲಿನ ತೇಜಿಗೆ ಕಾರಣವಾದವು. 

Advertisement

Udayavani is now on Telegram. Click here to join our channel and stay updated with the latest news.

Next