ಮುಂಬಯಿ : ಆರಂಭಿಕ ವಹಿವಾಟಿನಲ್ಲಿ 42 ಅಂಕಗಳ ನಷ್ಟಕ್ಕೆ ಗುರಿಯಾದ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟಿನಲ್ಲಿ ಬೆಳಗ್ಗೆ 11 ಗಂಟೆಯ ಹೊತ್ತಿಗೆ 189.84 ಅಂಕಗಳ ಮುನ್ನಡೆಯನ್ನು ದಾಖಲಿಸಿ 35,764.84 ಅಂಕಗಳ ಮಟ್ಟಕ್ಕೆ ಏರಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 56.30 ಅಂಕಗಳ ಮುನ್ನಡೆಯೊಂದಿಗೆ 10,806.10 ಅಂಕಗಳ ಮಟ್ಟವನ್ನು ತಲುಪಿತು.
ಡಾಲರ್ ಎದುರು ರೂಪಾಯಿ ಇಂದು 69 ರೂ. ಮಟ್ಟವನ್ನು ದಾಟಿರುವುದು ಕಳವಳಕ್ಕೆ ಕಾರಣವಾಯಿತು. 8 ಪೈಸೆ ಕುಸಿತ ಕಂಡ ರೂಪಾಯಿ 69.03 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ರಿಯಲನ್ಸ್, ಟೈಟಾನ್ ಕಂಪೆನಿ, ಟಾಟಾ ಮೋಟರ್, ಇನ್‌ಫೋಸಿಸ್, ಬಜಾಜ್ ಆಟೋ ಶೇರುಗಳು ಇಂದು ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಟಾಟಾ ಮೋಟರ್, ಎಚ್‌ಪಿಸಿಎಲ್, ಬಜಾಜ್ ಆಟೋ, ಹೀರೋ ಮೋಟೋ ಕಾರ್ಪ್, ಗ್ರಾಸಿಂ; ಟಾಪ್ ಲೂಸರ್‌ಗಳು: ಝೀ ಎಂಟರ್‌ಟೇನ್‌ಮೆಂಟರ್, ಗೇಲ್, ಎನ್‌ಟಿಪಿಸಿ, ವಿಪ್ರೋ, ಭಾರ್ತಿ ಇನ್‌ಫ್ರಾಟೆಲ್.