ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸಮರ ಮತ್ತೆ ತೀವ್ರಗೊಳ್ಳುವ ಭೀತಿ, ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ, ದುರ್ಬಲ ಜಾಗತಿಕ ಮಾರುಕಟ್ಟೆ, ಬ್ಯಾಂಕಿಂಗ್ ಮತ್ತು ಹಣಕಾಸು ಕಂಪೆನಿ ಶೇರುಗಳ ಭಾರೀ ಮಾರಾಟ, ವಹಿವಾಟುದಾರರಿಂದ ಲಾಭ ನಗದೀಕರಣ – ಇವೇ ಮೊದಲಾದ ಕಾರಣಗಳಿಂದಾಗಿ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 689.60 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,742.07 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೆ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಕ 197.70 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 10,754.00 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಇಂದು ಶೇ.1.8ರ ಕುಸಿತವನ್ನು ಕಂಡರೆ ಹೂಡಿಕೆದಾರರ ಸಂಪತ್ತು 2.26 ಲಕ್ಷ ಕೋಟಿ ರೂ.ಗಳಷ್ಟು ಕೊರೆದು ಹೋಯಿತು. ಮುಂಬಯಿ ಶೇರು 36,000 ಕ್ಕಿಂತ ಕೆಳಮಟ್ಟಕ್ಕೆ ಕುಸಿಯಿತಾದರೆ ನಿಫ್ಟಿ 10,800ಕ್ಕಿಂತ ಕೆಳಮಟ್ಟಕ್ಕೆ ಜಾರಿತು.
ಇಂದಿನ ವಹಿವಾಟಿನಲ್ಲಿ ವಿಪ್ರೋ, ಅದಾನಿ, ಮಾರುತಿ, ಇನ್‌ಫೋಸಿಸ್ , ಟಿಸಿಎ, ಏರ್‌ಟೆಲ್, ಏಶ್ಯನ್ ಪೇಂಟ್, ಬಜಾಜ್ ಆಟೋ ಶೇರುಗಳು ಶೇ.4.23ರ ನಷ್ಟಕ್ಕೆ ಗುರಿಯಾದವು. ಎನ್‌ಟಿಪಿಸಿ, ಪವರ್ ಗ್ರಿಡ್, ಕೋಲ್ ಇಂಡಿಯಾ ಶೇರುಗಳು ಶೇ.1.07 ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,740 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 895 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,699 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 146 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.