Advertisement

ಸೆನ್ಸೆಕ್ಸ್‌ 424 ಅಂಕಗಳ ಭಾರೀ ನಷ್ಟ; ಟಾಟಾ ಮೋಟರ್‌ ಶೇ.17 ಕುಸಿತ

10:55 AM Feb 08, 2019 | udayavani editorial |

ಮುಂಬಯಿ : ಅಮೆರಿಕ-ಚೀನ ನಡುವಿನ ವಾಣಿಜ್ಯ ಸುಂಕ ಸಮರ ಮತ್ತೆ ಕಳವಳಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಪೇಟೆಗಳಲ್ಲಿ ನೇತ್ಯಾತ್ಮಕ ಸನ್ನಿವೇಶ ಕಂಡು ಬಂದಿದ್ದು  ಇದರ ಪ್ರತಿಫ‌ಲನ ಎಂಬಂತೆ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟಿನಲ್ಲಿ 424.61 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 36,546.48 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 125.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,943.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಟಾಟಾ ಮೋಟರ್‌ ಶೇರು ಇಂದು ಶೇ.14ರಷ್ಟು ಕುಸಿದದ್ದು ಮಾರುಕಟ್ಟೆಗೆ ಒಂದು ಆಘಾತವೆನಿಸಿತು. ಮೆಟಲ್‌ ಮತ್ತು ಆಟೋ ಕ್ಷೇತ್ರದ ಶೇರುಗಳ ದಿನದ ವಹಿವಾಟಿನ ಕೊನೇ ತಾಸಿನಲ್ಲಿ ಭಾರೀ ಮಾರಾಟವನ್ನು ಕಂಡದ್ದೇ ಮುಂಬಯಿ ಶೇರು ಪೇಟೆಯ ಕುಸಿತಕ್ಕೆ ಕಾರಣವಾಯಿತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,650 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 952 ಶೇರುಗಳು ಮುನ್ನಡೆ ಸಾಧಿಸಿದವು; 1,574 ಶೇರುಗಳು ಹಿನ್ನಡೆಗೆ ಗುರಿಯಾದವು; 124 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next