Advertisement

18 ಪಿಎಸ್‌ಯು ಬ್ಯಾಂಕುಗಳಿಗೆ ಪುನರ್‌ ಧನ: ಬ್ಯಾಂಕ್‌ ಶೇರು ಜಿಗಿತ

05:41 AM Feb 21, 2019 | udayavani editorial |

ಮುಂಬಯಿ : ಸಾರ್ವಜನಿಕ ರಂಗದ 12 ಬ್ಯಾಂಕುಗಳಿಗೆ 48,239 ಕೋಟಿ ರೂ. ಪುನರ್‌ ಧನವನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಆರಂಭಿಕ ವಹಿವಾಟನಲ್ಲಿ  ಬ್ಯಾಂಕಿಂಗ್‌ ರಂಗದ ಶೇರುಗಳು ಉತ್ತಮ ಜಿಗಿತವನ್ನು ಕಂಡವು.

Advertisement

ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 22.33 ಅಂಕಗಳ ಮುನ್ನಡೆಯೊಂದಿಗೆ 35,778.59 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.50 ಅಂಕಗಳ ಮುನ್ನಡೆಯೊಂದಿಗೆ 10,741.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ರಿಲಯನ್ಸ್‌, ಟೆಕ್‌ ಮಹೀಂದ್ರ, ಟಿಸಿಎಸ್‌, ಎಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಶೇರುಗಳು ಅತ್ಯಂತ ಸಕ್ರಿಯವಾಗಿದ್ದವು. 

ಡಾಲರ್‌ ಎದುರು ರೂಪಾಯಿ ಇಂದು 9 ಪೈಸೆಗಳ ಏರಿಕೆಯನ್ನು ದಾಖಲಿಸಿ 71.02 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next