Advertisement

ಜಾಗತಿಕ ಶೇರು ದುರ್ಬಲ : ಮುಂಬಯಿ ಶೇರು 300 ಅಂಕ ಕುಸಿತ

04:46 PM Nov 20, 2018 | |

ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ರೂಪಾಯಿ ಬಲವರ್ಧನೆಯ ಹೊರತಾಗಿಯೂ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ವಿಪರೀತ ಶೇರು ಮಾರಾಟವನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು, ಮೂರು ದಿನಗಳ ನಿರಂತರ ಏರುಗತಿಯ ಬಳಿಕ, 300.37 ಅಂಕಗಳ ನಷ್ಟದೊಂದಿಗೆ 35,474.51 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 107.20 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,656.20 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

ಇಂದಿನ ವಹಿವಾಟಿನಲ್ಲಿ ಎಸ್‌ ಬ್ಯಾಂಕ್‌ ಶೇರುಗಳು ಶೇ.6.10ರ ತೀವ್ರ ಕುಸಿತವನ್ನು ಕಂಡವು. ಭಾರೀ ನಷ್ಟ ಕಂಡ ಇತರ ಶೇರುಗಳೆಂದರೆ ಟಾಟಾ ಸ್ಟೀಲ್‌, ವೇದಾಂತ, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಎಚ್‌ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್‌, ಮಾರುತಿ ಸುಜುಕಿ. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು   2,741 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 864 ಕಂಪೆನಿಗಳು ಮುನ್ನಡೆ ಸಾಧಿಸಿದವು;  1,728 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 149 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next